alex Certify 32,000 ವರ್ಷಗಳಷ್ಟು ಹಳೆಯ ಹಿಮಯುಗದ ಸಸ್ಯ ಮತ್ತೆ ಪುನರುಜ್ಜೀವನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

32,000 ವರ್ಷಗಳಷ್ಟು ಹಳೆಯ ಹಿಮಯುಗದ ಸಸ್ಯ ಮತ್ತೆ ಪುನರುಜ್ಜೀವನ….!

ಅತೀ ಪ್ರಾಚಿನ ಕಾಲದ ಸಸ್ಯವೊಂದು ಮತ್ತೆ ಕಾಣಿಸಿಕೊಂಡಿದ್ದು, ಪರಿಸರಾಸಕ್ತರು, ಸಂಶೋಧಕರ ಗಮನ ಸೆಳೆದಿದೆ.

ಆನಿಮೇಟೆಡ್​ ಚಲನಚಿತ್ರ ರ್ಫ್ಯಾಂಚೈಸ್​ನಲ್ಲಿ ಕಂಡುಬರುವ ಹಿಮಯುಗದ ಕಾಲ್ಪನಿಕ ಓಕ್ರೋನ್​- ಸ್ಯಾಬ್ರೆಟೂತ್​ವನ್ನು ಹೋಲುವ ಚಿತ್ರವೊಂದು ಟ್ವೀಟರ್​ನಲ್ಲಿ ವೈರಲ್​ ಆಗಿದೆ. ಇದು ಹಿಮಯುಗದಿಂದ ಹಿಂದೆ ಅಳಿವಿನಂಚಿನಲ್ಲಿರುವ ಸಸ್ಯವಾಗಿದೆ.

ವಿಜ್ಞಾನಿಗಳು 32,000 ವರ್ಷ ಹಳೆಯ ಬೀಜಗಳಲ್ಲಿ ಕಂಡುಬರುವ ಸಸ್ಯ ಅಂಗಾಂಶವನ್ನು ಬಳಸಿ ಪುನರುಜ್ಜೀವನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಶೋಧಕರು ಸಸ್ಯ ಬೀಜಗಳು ಹೆಪ್ಪುಗಟ್ಟಿರುವುದನ್ನು ಕಂಡುಹಿಡಿದರು.

ನ್ಯಾಷನಲ್​ ಜಿಯಾಗ್ರಫಿಕ್​ ಪ್ರಕಾರ, ಈ ಸಸ್ಯ, ಸೆೈಲೀನ್​ ಸ್ಟೆನೋಫಿಲ್ಲಾ, ಸೈಬೀರಿಯಾದ ಸ್ಥಳೀಯ ಹೂಬಿಡುವ ಸಸ್ಯವಾಗಿದೆ. ರಷ್ಯಾದ ವಿಜ್ಞಾನಿಗಳ ತಂಡದ ಪ್ರಯತ್ನದಿಂದಾಗಿ ಪುನರುಜ್ಜೀವನಗೊಳ್ಳುವ ಅತ್ಯಂತ ಹಳೆಯ ಸಸ್ಯವಾಗಿದೆ.

ಸುಮಾರು ಒಂದು ದಶಕದ ಹಿಂದೆ ಕೋಲಿಮಾ ನದಿಯ ದಡದಲ್ಲಿ ಬೀಜವನ್ನು ಕಂಡುಹಿಡಿದ ರಷ್ಯಾದ ತಂಡವು ರೇಡಿಯೊಕಾರ್ಬನ್​ ಡೇಟಿಂಗ್​ ಮೂಲಕ ಈ ಬೀಜಗಳು 32,000 ವರ್ಷಗಳಷ್ಟು ಹಳೆಯದಾಗಿದೆ ಎಂದು ದೃಢಪಡಿಸಿತು.

138 ಮೀಟರ್​ಗಳಷ್ಟು ಕೆಳಗೆ ಕಂಡುಬರುವ ಬೀಜಗಳು, ಘೇಂಡಾಮೃಗದ ಮೂಳೆಗಳ ಪದರಗಳಿಂದ ಆವೃತವಾಗಿತ್ತು. ಬಲಿತ ಬೀಜಗಳು ಹಾನಿಗೊಳಗಾಗಿದ್ದರೆ ಕೆಲವು ಬಲಿಯದ ಬೀಜಗಳು ಕಾರ್ಯಸಾಧ್ಯವಾದ ಸಸ್ಯ ವಸ್ತುಗಳನ್ನು ಸುತ್ತುವರೆದಿತ್ತು. ವಿಜ್ಞಾನಿಗಳು ಬೀಜಗಳಿಂದ ತೆಗೆದ ಅಂಗಾಂಶವನ್ನು ಬಾಟಲಿಗಳಲ್ಲಿ ಇರಿಸಿದರು ಮತ್ತು ಸಸ್ಯ ಮೊಳಕೆ ಬರಿಸುವಲ್ಲಿ ಯಶಸ್ವಿಯಾದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...