alex Certify ಚುಂಚನಕಟ್ಟೆಯಲ್ಲಿ ಪ್ರತಿಷ್ಠಾಪನೆಗೆ ಸಿದ್ಧಗೊಂಡ ಏಕಶಿಲಾ ಆಂಜನೇಯ ಮೂರ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚುಂಚನಕಟ್ಟೆಯಲ್ಲಿ ಪ್ರತಿಷ್ಠಾಪನೆಗೆ ಸಿದ್ಧಗೊಂಡ ಏಕಶಿಲಾ ಆಂಜನೇಯ ಮೂರ್ತಿ

ಕೇದಾರನಾಥ್ ನಲ್ಲಿ ಪ್ರತಿಷ್ಠಾಪನೆಗೊಂಡಿರುವ ಆದಿ ಶಂಕರಾಚಾರ್ಯ ಪ್ರತಿಮೆಯ ನಂತರ ವಿಶ್ವವಿಖ್ಯಾತಿಯನ್ನು ಗಳಿಸಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಮತ್ತವರ ತಂಡ ಇದೀಗ ಶ್ರೀ ಆಂಜನೇಯ ಮೂರ್ತಿಯನ್ನು ಸಿದ್ಧಪಡಿಸಿದ್ದು, ಇದನ್ನು ಕೆ.ಆರ್.ನಗರದ ಚುಂಚನಕಟ್ಟೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ.

31 ಅಡಿ ಎತ್ತರದ ಈ ಏಕಶಿಲಾ ಮೂರ್ತಿಗೆ ಮೈಸೂರಿನ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಸಕಲ ಪೂಜಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಬೃಹತ್ ಟ್ರಕ್ ಮತ್ತು ಕ್ರೇನ್ ಗಳ ನೆರವಿನಿಂದ ಚುಂಚನಕಟ್ಟೆಗೆ ಕೊಂಡೊಯ್ಯಲಾಯಿತು.

ಈ ಏಕಶಿಲಾ ಮೂರ್ತಿಯು ಕೃಷ್ಣಶಿಲೆಯದ್ದಾಗಿದ್ದು, ಇದರ ತೂಕ 28 ರಿಂದ 30 ಟನ್ ಆಗಿದೆ. ಚುಂಚನಕಟ್ಟೆಗೆ ತಲುಪಿದ ನಂತರ ಪೂಜಾ ಕೈಂಕರ್ಯಗಳು ಮತ್ತಿತರೆ ಕಾರ್ಯಗಳನ್ನು ಪೂರೈಸಿದ ನಂತರ ಸದ್ಯದಲ್ಲೇ ಅಧಿಕೃತವಾಗಿ ಪ್ರತಿಷ್ಠಾಪಿಸಲಾಗುತ್ತದೆ.

BREAKING: ಕಾರ್ –ಟಿಟಿ ವಾಹನ ಡಿಕ್ಕಿ; ಭೀಕರ ಅಪಘಾತದಲ್ಲಿ ಇಬ್ಬರ ಸಾವು

ಈ ಮೂರ್ತಿಯನ್ನು 40 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಕೆ.ಆರ್.ನಗರದ ಶ್ರೀ ತೋಪಮ್ಮ ದೇವಿ ದೇವಾಲಯದ ಆವರಣಕ್ಕೆ ಬರುತ್ತಿದ್ದಂತೆಯೇ ಭಕ್ತ ಸಮೂಹ ಪುಷ್ಪಾರ್ಚನೆ ಸಲ್ಲಿಸಿತು. ಈ ಸಂದರ್ಭದಲ್ಲಿ ಸರ್ವಧರ್ಮಗಳ ಧರ್ಮಗುರುಗಳು ಹಾಜರಿದ್ದು, ಆಂಜನೇಯ ಮೂರ್ತಿಯನ್ನು ಸ್ವಾಗತಿಸಿದರು.

ಇದಕ್ಕೂ ಮುನ್ನ ಚುಂಚನಕಟ್ಟೆಗೆ ಹೊರಟು ನಿಂತ ಆಂಜನೇಯ ಮೂರ್ತಿಗೆ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್, ಮಾಜಿ ಮೇಯರ್ ಆರ್.ಲಿಂಗಪ್ಪ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್.ಆರ್. ನಂದೀಶ್ ಸೇರಿದಂತೆ ಹಲವಾರು ಮುಖಂಡರು ಪೂಜೆ ಸಲ್ಲಿಸಿದರು. ಸಾ.ರಾ.ಮಹೇಶ್ ಅವರು ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಸಂದರ್ಭದಲ್ಲಿ ತಮ್ಮ ಶಾಸಕರ ಅನುದಾನದಲ್ಲಿ ಆಂಜನೇಯ ಮೂರ್ತಿ ನಿರ್ಮಾಣಕ್ಕಾಗಿ 40 ಲಕ್ಷ ರೂಪಾಯಿ ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...