alex Certify 3000 ಗಂಟೆಗಳಲ್ಲಿ ಸಿದ್ಧವಾಗಿತ್ತು ಚಿನ್ನ – ಬೆಳ್ಳಿಯ ಕುಸುರಿಗಳಿಂದ ಅಲಂಕೃತ ಆಲಿಯಾ ಭಟ್‌ ಲೆಹಂಗಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3000 ಗಂಟೆಗಳಲ್ಲಿ ಸಿದ್ಧವಾಗಿತ್ತು ಚಿನ್ನ – ಬೆಳ್ಳಿಯ ಕುಸುರಿಗಳಿಂದ ಅಲಂಕೃತ ಆಲಿಯಾ ಭಟ್‌ ಲೆಹಂಗಾ…!

ಸೆಲೆಬ್ರಿಟಿಗಳ ಮದುವೆ ಅಂದತಕ್ಷಣ ನಮ್ಮ ಗಮನ ಸೆಳೆಯೋದು ಅವರು ಧರಿಸಿರುವ ಉಡುಪು ಮತ್ತು ಆಭರಣಗಳು. ರಣಬೀರ್‌ ಕಪೂರ್‌ ಜೊತೆಗೆ ಹಸೆಮಣೆ ಏರಿರುವ ಆಲಿಯಾ ಭಟ್ ಕೂಡ ದುಬಾರಿ ಲೆಹಂಗಾ ಹಾಗೂ ಆಭರಣಗಳ ಮೂಲಕ ಕಣ್ಸೆಳೆದಿದ್ದಾರೆ.

ಆಲಿಯಾರ ಲೆಹಂಗಾದ ವಿಶೇಷತೆಗಳನ್ನು ಕೇಳಿದ್ರೆ ಸಾಮಾನ್ಯ ಜನರು ಹೌಹಾರಿಬಿಡ್ತಾರೆ. ಆಲಿಯಾ ಮೆಹಂದಿ ಸಮಾರಂಭಕ್ಕೆ ತೊಟ್ಟುಕೊಂಡಿರೋ ಲೆಹಂಗಾವನ್ನು ಖ್ಯಾತ ಫ್ಯಾಷನ್‌ ಡಿಸೈನರ್‌ ಮನೀಶ್‌ ಮಲ್ಹೋತ್ರಾ, ವಿನ್ಯಾಸ ಮಾಡಿದ್ದಾರೆ. ಹಾಗಾಗಿ ಇದರ ವಿಶೇಷತೆಗಳನ್ನು ಖುದ್ದು ಮನೀಶ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆಲಿಯಾ ಸೌಂದರ್ಯವನ್ನು ದುಪ್ಪಟ್ಟು ಮಾಡಿರೋ ಈ ಲೆಹೆಂಗಾದಲ್ಲಿ 180 ಪ್ಯಾಚ್‌ಗಳಿವೆ. ಬ್ಯಾಕ್‌ಲೆಸ್‌ ಬ್ಲೌಸ್‌ ಲೆಹೆಂಗಾದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಈ ಉಡುಪಿನ ಮೇಲಿರುವ ಕುಸುರಿ ಕೆಲಸಗಳನ್ನು ಅಸಲಿ ಚಿನ್ನ ಮತ್ತು ಬೆಳ್ಳಿಯಿಂದ ಮಾಡಿರೋದು ವಿಶೇಷ.

ಲೆಹಂಗಾ ಸಿದ್ಧಪಡಿಸಿಲು 3000 ಗಂಟೆಗಳೇ ಬೇಕಾಯ್ತಂತೆ. ಲೆಹಂಗಾದ ಜೊತೆ ಆಲಿಯಾ ದುಪ್ಪಟ್ಟಾ ಧರಿಸಿಲ್ಲ. ಸುಂದರವಾದ ಕುಂದನ್‌ ಆಭರಣವನ್ನು ತೊಟ್ಟು ಮಿಂಚಿದ್ದಾರೆ. ಲೆಹಂಗಾದ ವಿಶಿಷ್ಟ ಡಿಸೈನ್‌ನಿಂದಾಗಿ ಆಲಿಯಾ ಸಿಕ್ಕಾಪಟ್ಟೆ ಸ್ಟೈಲಿಶ್‌ ಹಾಗೂ ಅಂದವಾಗಿ ಕಾಣಿಸ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...