alex Certify BIG NEWS: ಸೆಪ್ಟೆಂಬರ್ 2022 ರ ಬಳಿಕ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಒಂದೇ ದಿನ 300 ಕೋವಿಡ್ ಪ್ರಕರಣಗಳು ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸೆಪ್ಟೆಂಬರ್ 2022 ರ ಬಳಿಕ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಒಂದೇ ದಿನ 300 ಕೋವಿಡ್ ಪ್ರಕರಣಗಳು ದಾಖಲು

ದೇಶದಾದ್ಯಂತ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗ್ತಿದ್ದು ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 300 ಕೋವಿಡ್ ಪ್ರಕರಣಗಳು ದಾಖಲಾಗಿದೆ.

ಕಳೆದ ವರ್ಷ ಸೆಪ್ಟೆಂಬರ್‌ ನಂತರ ಬುಧವಾರ ಒಂದೇ ದಿನ 300 ಪ್ರಕರಣಗಳು ದಾಖಲಾಗಿದೆ. ಪಾಸಿಟಿವಿಟಿ ದರವು ಶೇಕಡಾ 13.89 ಕ್ಕೆ ಏರಿದ್ದು,  ಎರಡು ಕೋವಿಡ್ ಸಂಬಂಧಿತ ಸಾವುಗಳು ವರದಿಯಾಗಿವೆ ಎಂದು ನಗರ ಆರೋಗ್ಯ ಇಲಾಖೆ ಹಂಚಿಕೊಂಡ ಮಾಹಿತಿ ತಿಳಿಸಿದೆ.

ಮಂಗಳವಾರ ದೆಹಲಿಯು 214 ಪ್ರಕರಣಗಳನ್ನು ದಾಖಲಿಸಿದ್ದು, ಶೇಕಡಾ 11.82 ಪಾಸಿಟಿವಿಟಿ ರೇಟ್ ಹೊಂದಿತ್ತು.

ದೇಶದಲ್ಲಿ H3N2 ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿರುವ ನಡುವೆ ದೆಹಲಿಯು ಕಳೆದ ಕೆಲವು ದಿನಗಳಿಂದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಂಡಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...