ದೇಶದಾದ್ಯಂತ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗ್ತಿದ್ದು ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 300 ಕೋವಿಡ್ ಪ್ರಕರಣಗಳು ದಾಖಲಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ ನಂತರ ಬುಧವಾರ ಒಂದೇ ದಿನ 300 ಪ್ರಕರಣಗಳು ದಾಖಲಾಗಿದೆ. ಪಾಸಿಟಿವಿಟಿ ದರವು ಶೇಕಡಾ 13.89 ಕ್ಕೆ ಏರಿದ್ದು, ಎರಡು ಕೋವಿಡ್ ಸಂಬಂಧಿತ ಸಾವುಗಳು ವರದಿಯಾಗಿವೆ ಎಂದು ನಗರ ಆರೋಗ್ಯ ಇಲಾಖೆ ಹಂಚಿಕೊಂಡ ಮಾಹಿತಿ ತಿಳಿಸಿದೆ.
ಮಂಗಳವಾರ ದೆಹಲಿಯು 214 ಪ್ರಕರಣಗಳನ್ನು ದಾಖಲಿಸಿದ್ದು, ಶೇಕಡಾ 11.82 ಪಾಸಿಟಿವಿಟಿ ರೇಟ್ ಹೊಂದಿತ್ತು.
ದೇಶದಲ್ಲಿ H3N2 ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿರುವ ನಡುವೆ ದೆಹಲಿಯು ಕಳೆದ ಕೆಲವು ದಿನಗಳಿಂದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಂಡಿದೆ.