ಪೋಲಿಯೊ ಅಥವಾ ಪೋಲಿಯೊಮೈಲಿಟಿಸ್ ಹೆಚ್ಚು ಸಾಂಕ್ರಾಮಿಕ ರೋಗವಾಗಿದ್ದು, ಮುಖ್ಯವಾಗಿ ಮಲದ ವಸ್ತುವಿನಿಂದ ಮೌಖಿಕ ಮಾಲಿನ್ಯದ ಮೂಲಕ ಹರಡುತ್ತದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಈ ವೈರಸ್ ಸೋಂಕಿತ ವ್ಯಕ್ತಿಯ ಮಲದಲ್ಲಿ ವಾಸಿಸುತ್ತವೆ. ಸೋಂಕಿತ ಜನರು ಮಲವಿಸರ್ಜನೆಯ ನಂತರ ತಮ್ಮ ಕೈಗಳನ್ನು ಚೆನ್ನಾಗಿ ತೊಳೆಯದಿದ್ದರೆ ಇತರರಿಗೆ ಹರಡಬಹುದು. ಜನರು ನೀರು ಕುಡಿಯುವಾಗ ಅಥವಾ ಸೋಂಕಿತ ಮಲದಿಂದ ಕಲುಷಿತಗೊಂಡ ಆಹಾರವನ್ನು ಸೇವಿಸಿದರೆ ಸಹ ಸೋಂಕಿಗೆ ಒಳಗಾಗಬಹುದು.
ಈ ವೈರಸ್ ಮಕ್ಕಳಲ್ಲಿ ಪಾರ್ಶ್ವವಾಯುವನ್ನು ಉಂಟುಮಾಡಬಹುದು ಮತ್ತು ಅವರನ್ನು ದುರ್ಬಲಗೊಳಿಸಬಹುದು. ಕೆಲವೊಮ್ಮೆ ಇದು ಮಾರಣಾಂತಿಕವಾಗಿಯೂ ಪರಿಣಮಿಸುತ್ತದೆ. ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ, ಲಸಿಕೆಯಿಂದ ಈ ರೋಗವನ್ನು ನಿರ್ಮೂಲನೆ ಮಾಡಬಹುದಾಗಿದೆ.
ಮೊದಲಿಗೆ ವೈರಸ್ ಕರುಳಿನಿಂದ ಶುರುವಾಗಿ ನಂತರ ಅದು ನರಮಂಡಲವನ್ನು ಆಕ್ರಮಿಸುತ್ತದೆ. ಇದು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ರೋಗಿಗೆ ಯಾವುದೇ ಚಿಕಿತ್ಸೆ ಇಲ್ಲದ ಕಾರಣ ರೋಗಿಯು ಜೀವನ ಪರ್ಯಂತ ಅಂಗವಿಕಲನಾಗಬೇಕಾಗುತ್ತದೆ.