alex Certify 30ರ ಯುವಕನಂತೆ ಬದಲಾಗಿದ್ದಾರೆ 50 ವರ್ಷದ ಈ ಗಾಯಕ; ಫೋಟೋ ನೋಡಿ ಶಾಕ್‌ ಆಗಿದ್ದಾರೆ ಫ್ಯಾನ್ಸ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

30ರ ಯುವಕನಂತೆ ಬದಲಾಗಿದ್ದಾರೆ 50 ವರ್ಷದ ಈ ಗಾಯಕ; ಫೋಟೋ ನೋಡಿ ಶಾಕ್‌ ಆಗಿದ್ದಾರೆ ಫ್ಯಾನ್ಸ್‌….!

ತೇರಾ ಚೆಹರಾ, ಸುನ್‌ ಜರಾ, ದಿಲ್‌ ಕ್ಯಾ ಕರೇನಂತಹ ಜನಪ್ರಿಯ ಹಾಡುಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಗಾಯಕ ಅದ್ನಾನ್‌ ಸಾಮಿ. ಇಂದಿಗೂ ಈ ಹಾಡುಗಳನ್ನು ಸಂಗೀತ ಪ್ರಿಯರು ಗುನುಗುತ್ತಾರೆ. ಕಳೆದ ಕೆಲವು ವರ್ಷಗಳಿಂದ ಅದ್ನಾನ್‌ ಸಾಮಿ ಹಾಡುಗಳು ಮಾತ್ರವಲ್ಲ, ಅವರ ಲುಕ್‌ ಕೂಡ ಚರ್ಚೆಯಲ್ಲಿದೆ.

ಮೊದಲು ನೂರು ಕೆಜಿಗೂ ಅಧಿಕ ತೂಕ ಹೊಂದಿದ್ದ ಅದ್ನಾನ್‌ ಸಾಮಿ ಗುಂಡಗಿದ್ದರು. ಆದ್ರೀಗ ಅವರ ಲುಕ್‌ ಸಂಪೂರ್ಣ ಬದಲಾಗಿದೆ. ಭಾರೀ ಪ್ರಮಾಣದಲ್ಲಿ ತೂಕ ಕಡಿಮೆ ಮಾಡಿಕೊಂಡಿರೋ ಈ ಸಿಂಗರ್‌ ನವ ಯುವಕನಂತೆ ಮಿಂಚುತ್ತಿದ್ದಾರೆ.

ಸದ್ಯ ಅದ್ನಾನ್‌ ಸಾಮಿ ತಮ್ಮ ಪತ್ನಿ ಮತ್ತು ಮಗಳ ಜೊತೆ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್‌ ಮಾಡ್ತಿದ್ದಾರೆ. ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆ ಫೋಟೋಗಳನ್ನು ನೋಡ್ತಿದ್ರೆ ಅಭಿಮಾನಿಗಳಿಗೆ ಗುರುತೇ ಸಿಗದಷ್ಟು ಅದ್ನಾನ್‌ ಸಾಮಿ ಬದಲಾಗಿದ್ದಾರೆ.  ತೂಕ ಕಡಿಮೆ ಮಾಡಿಕೊಂಡು ಸಖತ್‌ ಫಿಟ್‌ & ಫೈನ್‌ ಆಗಿ ಕಾಣಿಸ್ತಿದ್ದಾರೆ.

ಅದ್ನಾನ್‌ ಸಾಮಿಗೆ ಈಗ 50 ವರ್ಷ. ಆದ್ರೆ 30ರ ಯುವಕನಂತೆ ಕಾಣಿಸ್ತಿದ್ದಾರೆ. ಅದ್ನಾನ್‌ ಸಾಮಿ ಅವರ ಟ್ರಾನ್ಸ್‌ಫರ್ಮೇಶನ್‌ ನೋಡಿ ಅಭಿಮಾನಿಗಳು ದಂಗಾಗಿ ಹೋಗಿದ್ದಾರೆ. ಜಾಲತಾಣದಲ್ಲಿ ಅವರ ಫೋಟೋಗಳನ್ನು ನೋಡಿ ನಾನಾ ರೀತಿಯ ಕಾಮೆಂಟ್‌ಗಳು ಕೂಡ ಬರ್ತಿವೆ. ದಿನದಿಂದ ದಿನಕ್ಕೆ ಅದ್ನಾನ್‌ ಸಾಮಿ ಅವರ ವಯಸ್ಸು ಕಡಿಮೆಯಾಗ್ತಿದ್ಯಾ ಅಂತಾ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...