alex Certify ಐದೇ ನಿಮಿಷದಲ್ಲಿ ಕ್ಯೂಬ್​ ಸಾಲ್ವ್​ ಮಾಡಿದ 3 ವರ್ಷದ ಬಾಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐದೇ ನಿಮಿಷದಲ್ಲಿ ಕ್ಯೂಬ್​ ಸಾಲ್ವ್​ ಮಾಡಿದ 3 ವರ್ಷದ ಬಾಲೆ…!

2 ಅಥವಾ 3 ವರ್ಷದ ಮಗುವಿನಿಂದ ನೀವು ಏನನ್ನು ನಿರೀಕ್ಷಿಸಬಹುದು ? ಇತ್ತೀಚಿನ ದಿನಗಳಲ್ಲಿ ಆ ವಯಸ್ಸಿನ ಮಕ್ಕಳು ಮಾಡುವ ಸಣ್ಣ ಸಣ್ಣ ಚುರುಕು ಚಾಕಚಕ್ಯತೆಗಳು, ಕಲಾ ಪ್ರದರ್ಶನ ಸಾಮಾಜಿಕ ಜಾಲತಾಣದ ಮೂಲಕ ಜಗಜ್ಜಾಹೀರಾಗಿಬಿಡುತ್ತದೆ. ಇಲ್ಲೊಂದು ಪುಟ್ಟ ಹುಡುಗಿ ಇದೇ ರೀತಿಯ ಕಾರಣಕ್ಕೆ ಗಮನ ಸೆಳೆದಿದ್ದು, ದಾಖಲೆಯನ್ನೂ ಬರೆದಿದ್ದಾಳೆ.

ದೆಹಲಿಯ ವಿವೇಕ್​ ವಿಹಾರ್​ನ ದಿವಿಶಾ ಬನ್ಸಾಲಿಗೆ ಮೂರು ವರ್ಷ ವಯಸ್ಸು. ಆಕೆ ಈಗಾಗಲೇ ಮೂರು-ಲೇಯರ್ಡ್​, ಟು-ವೇ ಮತ್ತು ಪ್ರಿಮಿಕ್ಸ್​ ಕ್ಯೂಬ್​ಗಳನ್ನು ಪರಿಹರಿಸುವ ಮೂಲಕ ಕಿರಿಯ ಕ್ಯೂಬ್​ ಸಾಲ್ವರ್​ ಪ್ರಶಸ್ತಿಯನ್ನು ಗೆದ್ದಿದ್ದಾಳೆ. ಹೆಚ್ಚು ಆಶ್ಚರ್ಯಕರ ಮತ್ತು ಮನಸ್ಸಿಗೆ ಮುದ ನೀಡುವ ಸಂಗತಿಯೆಂದರೆ ದಿವಿಶಾ ಈ ಸಾಧನೆಯನ್ನು ಕೇವಲ ಐದು ನಿಮಿಷಗಳಲ್ಲಿ ಪೂರೈಸಿ ಸಾಧಿಸಿದ್ದಾಳೆ. ಇಂಡಿಯನ್​ ಕ್ಯೂಬ್​ ಅಸೋಸಿಯೇಷನ್​ ಪ್ರಕಾರ, ಈ ಹಿಂದೆ ದಾಖಲೆಯನ್ನು ಹೊಂದಿದ್ದ ಮಗು ಮೂರು ಗಂಟೆಗಳನ್ನು ತೆಗೆದುಕೊಂಡಿತ್ತು.

ದಿವಿಶಾ ತಾಯಿ ಆರತಿ ಬನ್ಸಾಲಿಯವರು ತಮ್ಮ ಮಗಳ ಸಾಧನೆ ಹಿಂದಿನ ಕತೆಯನ್ನ ವಿವರಿಸಿದ್ದು, ದಿವಿಶಾ ಯಾವಾಗಲೂ ಕ್ಯೂಬ್​ಗಳನ್ನು ಸ್ವತಃ ಪರಿಹರಿಸಲು ಇಷ್ಟಪಡುತ್ತಾಳೆ, ಮುಂಚಿನಿಂದಲೂ ಚುರುಕು ಸ್ವಭಾವ, ಒಂದು ದಿನ ಓದುತ್ತಿರುವಾಗ ದಿವಿಶಾ ಕ್ಯೂಬ್​ ಹಿಡಿದು ಪರಿಹರಿಸಲು ಪ್ರಾರಂಭಿಸಿದಳು. ಅವಳ ಆಸಕ್ತಿ ಹೆಚ್ಚಾಯಿತು, ಆದ್ದರಿಂದ ಕ್ಯೂಬ್​ಗಳನ್ನು ಪರಿಹರಿಸುವ ತಂತ್ರಗಳನ್ನು ಕಲಿಸಲು ಯೋಚಿಸಿದೆ. ಕೇವಲ 40 ದಿನಗಳಲ್ಲಿ ದಿವಿಶಾಗೆ ಪಾಠ ಕಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...