alex Certify BIG NEWS : ಸಿನಿಮಾ ಪೈರಸಿಗೆ 3 ವರ್ಷ ಜೈಲು ಶಿಕ್ಷೆ : ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಅಂಗೀಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಸಿನಿಮಾ ಪೈರಸಿಗೆ 3 ವರ್ಷ ಜೈಲು ಶಿಕ್ಷೆ : ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಅಂಗೀಕಾರ

ನವದೆಹಲಿ : ಸಿನಿಮಾ ಪೈರಸಿಗೆ 3 ವರ್ಷ ಜೈಲು ಶಿಕ್ಷೆ ಮತ್ತು ಚಲನಚಿತ್ರ ನಿರ್ಮಾಣ ವೆಚ್ಚದ ಶೇಕಡ 5 ರಷ್ಟು ದಂಡ ವಿಧಿಸುವ ಕಠಿಣ ನಿಯಮಕ್ಕೆ ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಅಂಗೀಕಾರ ಮಾಡಲಾಯಿತು.ಈವರೆಗೂ ಪೈರಸಿ ಪ್ರಕರಣಗಳನ್ನು ಆಯಾ ರಾಜ್ಯಗಳ ಪ್ರತ್ಯೇಕ ಗೂಂಡಾ ಕಾಯ್ದೆಯಡಿ ದಾಖಲು ಮಾಡಲಾಗುತ್ತಿತ್ತು.

ರಾಜ್ಯಸಭೆಯಲ್ಲಿ ಸಿನಿಮಾಟೋಗ್ರಾಫ್ ಧ್ವನಿಮತದಿಂದ (3550)-2023 ಪ್ರದರ್ಶಿಸುವುದನ್ನು ನಿರ್ಬಂಧಿಸಲು ಸಿನಿಮಾಟೋಗ್ರಾಫಿ ಕಾಯ್ದೆಗೆ ಸೆಕ್ಷನ್ 6ಎಎ ಹಾಗೂ ಸೆಕ್ಷನ್ 6 ಎಬಿ ಸೇರ್ಪಡೆ ಮಾಡಲು ಕೂಡ ಈ ವಿಧೇಯಕ ಅವಕಾಶ ಕಲ್ಪಿಸುತ್ತದೆ.

ಸಿನಿಮಾಗಳ ಪ್ರಸಾರಕ್ಕೆ ಪ್ರತ್ಯೇಕ ಪ್ರಮಾಣಪತ್ರ ಇದರಲ್ಲಿದೆ. ಅಂದರೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಚಿತ್ರ ಒಟಿಟಿ ಪ್ರಸಾರ ಆಗಬೇಕೆಂದರೆ ಕೆಲವು ‘ಕತ್ತರಿ ಪ್ರಯೋಗ’ ಒಳಗಾಗುತ್ತದೆ ಹಾಗೂ ಅದಕ್ಕೆ ಬೇರೆ ಸರ್ಟಿಫಿಕೇಟನ್ನು ಕೂಡ ನೀಡಲಾಗುತ್ತದೆ. ಸಿನಿಮಾಗಳಿಗೆ ನೀಡಲಾಗುವ ‘UA’ ಸರ್ಟಿಫಿಕೇಟ್ ಅಡಿಯಲ್ಲಿ ವಯಸ್ಸಿನ-ಆಧಾರದ ಮೇಲೆ ಮೂರು ಪ್ರಮಾಣಪತ್ರಗಳನ್ನು ನೀಡುವ ಪ್ರಸ್ತಾವವನ್ನೂ ಸೇರಿಸಲಾಗಿದೆ. ‘UA 7+’, ‘UA 13+’ ಮತ್ತು ‘UA 16+’. ಹಾಗೂ ಇದರ ಜೊತೆ ದೂರದರ್ಶನ ಅಥವಾ ಇತರ ಮಾಧ್ಯಮಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಪ್ರತ್ಯೇಕ ಪ್ರಮಾಣಪತ್ರ ನೀಡಲು CBFC ಗೆ ಈ ಮಸೂದೆ ಅಧಿಕಾರ ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...