ಜಗತ್ತಿನಲ್ಲಿ ಮಕ್ಕಳನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿ ಅಂದ್ರೆ ಅದು ತಾಯಿ. ತಾಯಿ ಎಂದೂ ತನ್ನ ಮಕ್ಕಳಿಗೆ ಕೆಟ್ಟದು ಮಾಡಲು ಸಾಧ್ಯವಿಲ್ಲ. ಆದ್ರೆ ಯುಕೆಯಲ್ಲಿ ತಾಯಿಯೊಬ್ಬಳು ಮಾಡಿದ ಕೆಲಸ ಆಘಾತಕಾರಿಯಾಗಿದೆ. ತನ್ನ ಮೂರು ವರ್ಷದ ಮಗುವನ್ನು ಆಕೆ ಹತ್ಯೆಗೈದಿದ್ದಾಳೆ.
ಆರೋಪಿ, ಪ್ರೇಮಿ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಮುಂದಾಗಿದ್ದಳಂತೆ. ಆದ್ರೆ ಇದಕ್ಕೆ ಮಗಳು ಅಡ್ಡಿಯಾಗಿದ್ದಳಂತೆ. ಇದ್ರಿಂದ ಕೋಪಗೊಂಡ ತಾಯಿ, ಮಗಳ ಹತ್ಯೆ ಮಾಡಿದ್ದಾಳೆ. ಆಕೆ ಹಾಗೂ ಆಕೆ ಪ್ರೇಮಿಗೆ ಕೋರ್ಟ್ 15 ವರ್ಷಗಳ ಜೈಲು ಶಿಕ್ಷೆ ನೀಡಿದೆ.
ಲಸಿಕೆ ಪ್ರಮಾಣ ಪತ್ರ ತೋರಿ ತೋರಿ ರೋಸತ್ತ ಕಮೆಡಿಯನ್ ಕೊನೆಗೆ ಮಾಡಿದ್ದು ಈ ಕೆಲಸ
ನಿಕೋಲಾ ಪ್ರೀಸ್ಟ್ ಕಳೆದ ವರ್ಷ ಆಗಸ್ಟ್ 9 ರಂದು ತನ್ನ ಮಗಳನ್ನು ಕ್ರೂರವಾಗಿ ಥಳಿಸಿದ್ದಳು. ಇದಾದ ನಂತರ ಸಹಾಯವಾಣಿಗೆ ಕರೆ ಮಾಡಿದ್ದಳು. ಆದ್ರೆ ಅಷ್ಟರೊಳಗೆ ಮಗು ಸಾವನ್ನಪ್ಪಿತ್ತು. ಆಕೆಯ ಗೆಳೆಯ ಕ್ಯಾಲಮ್ ರೆಡ್ ಫರ್ನ್ ಕೂಡ ಹತ್ಯೆಯನ್ನು ಬೆಂಬಲಿಸಿದ್ದ. ಬರ್ಮಿಂಗ್ಹ್ಯಾಮ್ ಕ್ರೌನ್ ಕೋರ್ಟ್ ಈ ಪ್ರಕರಣದಲ್ಲಿ ಇಬ್ಬರಿಗೂ ಶಿಕ್ಷೆ ವಿಧಿಸಿದೆ.
ಆಗಸ್ಟ್ 8 ರ ಸಂಜೆ, ಇಬ್ಬರೂ ಫ್ಲಾಟ್ನಲ್ಲಿ ಲೈಂಗಿಕ ಸಂಬಂಧ ಹೊಂದಲು ಬಯಸಿದ್ದರು ಎನ್ನಲಾಗಿದೆ. ಅಷ್ಟರಲ್ಲೇ ನಿದ್ರೆಯಿಂದ ಎದ್ದ ಮಗಳು ಆಟ ಶುರು ಮಾಡಿದ್ದಳು. ಇದರಿಂದ ಕೋಪಗೊಂಡ ಇಬ್ಬರೂ ರಾತ್ರಿ ಮಗುವನ್ನು ಕ್ರೂರವಾಗಿ ಥಳಿಸಿದ್ದರು. ಇದ್ರಿಂದ ಮಗು ಸಾವನ್ನಪ್ಪಿತ್ತು.