alex Certify ಹುಡುಗಿಯನ್ನು ಹೋಟೆಲ್ ನಲ್ಲಿ ಕೂಡಿಹಾಕಿ ಲೈಂಗಿಕ ಕಿರುಕುಳ, ಮೂವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗಿಯನ್ನು ಹೋಟೆಲ್ ನಲ್ಲಿ ಕೂಡಿಹಾಕಿ ಲೈಂಗಿಕ ಕಿರುಕುಳ, ಮೂವರು ಅರೆಸ್ಟ್

ಚೆನ್ನೈ: ತಮಿಳುನಾಡಿನಲ್ಲಿ ಹದಿ ಹರೆಯದ ಬಾಲಕಿಯನ್ನು ಅಪಹರಿಸಿದ ಮೂವರು ಹೋಟೆಲ್ ನಲ್ಲಿ ಕೂಡಿಹಾಕಿ ಲೈಂಗಿಕ ಕಿರುಕುಳ ನೀಡಿದ್ದಾರೆ.

ಪೂನಮಲ್ಲೀ ಪ್ರದೇಶದಲ್ಲಿ ಘಟನೆ ನಡೆದಿದೆ. 15 ವರ್ಷದ ಬಾಲಕಿ 5 ವರ್ಷದ ಹಿಂದೆ ಪೋಷಕರಿಂದ ದೂರವಾಗಿದ್ದು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದುಕೊಂಡು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಳು. ಆಕೆ ಗುರುವಾರ ಕೆಲಸ ಮಾಡಲು ಸಮೀಪದ ಅಂಗಡಿಯೊಂದಕ್ಕೆ ಹೋದವಳು ಮನೆಗೆ ವಾಪಸ್ ಆಗಿರಲಿಲ್ಲ.

ಆಕೆಗೆ ಪರಿಚಿತನಾಗಿದ್ದ ಮಣಿ ಎಂಬಾತ ಬೈಕ್ ನಲ್ಲಿ ಕರೆದುಕೊಂಡು ಹೋಗಿ ಹೋಟೆಲ್ ನಲ್ಲಿ ಕೂಡಿ ಹಾಕಿದ್ದಾನೆ. ಅಲ್ಲಿಗೆ ತನ್ನ ಇಬ್ಬರು ಸ್ನೇಹಿತರನ್ನು ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿಯನ್ನು ಕೂಡಿಹಾಕಿ ಲೈಂಗಿಕ ದೌರ್ಜನ್ಯ ಎಸಗಲಾಗಿದ್ದು, ಬಾಲಕಿಯ ಪೋಷಕರು ದೂರು ನೀಡಿದ್ದರೂ, ಆಕೆಯ ಬಳಿ ಮೊಬೈಲ್ ಫೋನ್ ಇಲ್ಲದ ಕಾರಣ ಪತ್ತೆ ಹಚ್ಚಲು ಪೊಲೀಸರು ಹರಸಾಹಸ ನಡೆಸಿದ್ದಾರೆ.

ಕೊನೆಗೆ ಆಕೆಗೆ 6 ತಿಂಗಳಿಂದ ಪರಿಚಿತನಾಗಿದ್ದ ಮಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ. ಪೋಕ್ಸೋ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...