alex Certify ʼ3 ಈಡಿಯಟ್ಸ್ʼ​ ಖ್ಯಾತಿ ನಟ ಅಖಿಲ್​ ಮಿಶ್ರಾ ನಿಧನದ ಬಗ್ಗೆ ಸ್ಪಷ್ಟನೆ ನೀಡಿದ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼ3 ಈಡಿಯಟ್ಸ್ʼ​ ಖ್ಯಾತಿ ನಟ ಅಖಿಲ್​ ಮಿಶ್ರಾ ನಿಧನದ ಬಗ್ಗೆ ಸ್ಪಷ್ಟನೆ ನೀಡಿದ ಪತ್ನಿ

3 ಈಡಿಯಟ್ಸ್​ ಖ್ಯಾತಿಯ ನಟ ಅಖಿತ್​ ಮಿಶ್ರಾ ಸೆಪ್ಟೆಂಬರ್​ 21ರಂದು ತಮ್ಮ ನಿವಾಸದಲ್ಲಿ ನಿಧನರಾಗಿದ್ದರು. ಅವರು ತಮ್ಮ ನಿವಾಸದಲ್ಲಿಯೇ ನಿಧನರಾಗಿದ್ದಾರೆ. ಅಡುಗೆ ಮನೆಯಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಬಿದ್ದಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದ್ದು ವರದಿಗಳಿಗಾಗಿ ಕಾಯಲಾಗುತ್ತಿದೆ ಎಂದು ತಿಳಿದು ಬಂದಿದೆ.

ನಟ ಅಖಿತ್​ ಮಿಶ್ರಾನ ಪತ್ನಿ ಸುಜಾನೆ ಹೈದರಾಬಾದ್​ನಲ್ಲಿ ಶೂಟಿಂಗ್​ನಲ್ಲಿ ಇದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಪತಿಯ ಸಾವಿನ ವಿಚಾರವಾಗಿ ಮಾತನಾಡಿದ ಅವರು, ತಮ್ಮ ಪತಿಯ ಸಾವಿನ ಬಗ್ಗೆ ಹರಡುತ್ತಿದ್ದ ವಿವಿಧ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸಂದರ್ಶನದಲ್ಲಿ ಸುಝೇನ್​ ಬರ್ನೆಟ್​ ತನ್ನ ಪತಿ ದಿವಂಗತ ಅಖಿಲ್​ ಮಿಶ್ರಾ ತಮ್ಮ ಮುಂಬೈ ನಿವಾಸದಲ್ಲಿರುವ ಅಡಿಗೆ ಮನೆಯಲ್ಲಿ ಬಿದ್ದು ಸಾವನ್ನಪ್ಪಿದ್ದರು. ಅಲ್ಲಿ ವಾಸ್ತವವವಾಗಿ ಯಾವ ಘಟನೆ ನಡೆದಿದೆ ಎಂಬುದು ನನಗೂ ತಿಳಿದಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋಗುವವರೆಗೂ ಅವರಿಗೆ ಪ್ರಜ್ಞೆ ಇತ್ತು. ನನ್ನ ಸ್ನೇಹಿತರಾದ ವಿಪುಲ್​, ಭುವೇಶ್​ ಮದನ್​ರೊಂದಿಗೆ ಅವರು ಮಾತನಾಡಿದ್ದರು. ಆದರೆ ಭಕ್ತಿ ವೇದಾಂತ ಆಸ್ಪತ್ರೆಯಲ್ಲಿ ಅವರು ತೀವ್ರ ರಕ್ತಸ್ರಾವದಿಂದ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಅಖಿಲ್​ ಒಬ್ಬ ಒಳ್ಳೆಯ ಮನುಷ್ಯ ಎಂದು ಸುಝೇನ್​ ಹೇಳಿದ್ದಾರೆ. ಅವರು ಸ್ವಲ್ಪ ಹಠಮಾರಿ. ಅವರು ಯಾವುದೇ ವಿಚಾರಗಳಲ್ಲಿ ಆಡಂಬರ ಇರಲಿಲ್ಲ. ಆದರೆ ಅವರು ಸರಿಯಾಗಿ ನಿಮ್ಮ ವಾದವನ್ನು ಮಂಡಿಸಿದ್ರೆ ತಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ತಿದ್ದರು ಎಂದು ಸುಜೇನ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...