ಮಧ್ಯ ಪ್ರದೇಶ ಬಾಲಾಘಾಟ್‌ನ ಜನಪದ ಪಂಚಾಯಿತಿ ಕಚೇರಿಯಲ್ಲಿ ಇಸ್ಪೀಟಾಟದಲ್ಲಿ ನಿರತರಾಗಿದ್ದ ಅಧಿಕಾರಿಗಳ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂವರನ್ನು ಕೂಡಲೇ ಅಮಾನತಿನಲ್ಲಿಡಲು ಕಲೆಕ್ಟರ್ ಗಿರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಪಂಚಾಯಿತಿ ಸಮನ್ವಯ ಅಧಿಕಾರಿ ರಾಜ್ಕುಮಾರ್ ಧೋಕ್, ಸಹಾಯಕ ಗ್ರೇಡ್-3 ಮನೋಜ್ ಚೌರೆ ಹಾಗೂ ಮಹೇಶ್ ಕುಂಬಾರೆ ಹೆಸರಿನ ಮೂವರು ಹೀಗೆ ಚಿತ್ರದಲ್ಲಿ ಇಸ್ಪೀಟಿನಾಟದಲ್ಲಿ ಭಾಗಿಯಾಗಿದ್ದವರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ವರಶಿವಾನಿ ಸಲಹೆ ಮೇರೆಗೆ ಕಲೆಕ್ಟರ್ ಗಿರೀಶ್ ಕುಮಾರ್ ಮಿಶ್ರಾ ಈ ಮೂವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ವರಶಿವಾನಿಯ ಜಿಲ್ಲಾ ಕಚೇರಿಯನ್ನು ಇಂಥ ದುಷ್ಕರ್ಮಿಗಳು ಜೂಜಿನ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ವರದಿಗಳು ಪ್ರಕಟಗೊಂಡಿವೆ.