alex Certify ಸಾಕು ನಾಯಿ ರಕ್ಷಿಸಲು ಹೆಬ್ಬಾವಿನ ವಿರುದ್ಧ ಹೋರಾಡಿದ ಪುಟ್ಟ ಹುಡುಗರು; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕು ನಾಯಿ ರಕ್ಷಿಸಲು ಹೆಬ್ಬಾವಿನ ವಿರುದ್ಧ ಹೋರಾಡಿದ ಪುಟ್ಟ ಹುಡುಗರು; ವಿಡಿಯೋ ವೈರಲ್

ಜನರು ತಮ್ಮ ಸಾಕುಪ್ರಾಣಿಗಳಿಗಾಗಿ ಪ್ರಾಣವನ್ನು ಪಣಕ್ಕಿಟ್ಟ ಹಲವಾರು ಉದಾಹರಣೆಗಳಿವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೂವರು ಹುಡುಗರು ತಮ್ಮ ಮುದ್ದಿನ ನಾಯಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸಿರುವ ವಿಡಿಯೋ ವೈರಲ್ ಆಗಿದೆ.

ಇದು ಎಲ್ಲಿ ನಡೆದಿದೆ ಎಂಬುದು ಗೊತ್ತಾಗಿಲ್ಲ. ಆದರೆ ಹುಡುಗರು ಹೆಬ್ಬಾವಿನ ವಿರುದ್ಧ ಧೈರ್ಯದಿಂದ ಹೋರಾಡಿದ್ದು, ತಮ್ಮ ನಾಯಿಯನ್ನು ಉಳಿಸುವಲ್ಲಿ ಯಶಸ್ವಿಯಾದರು.

ಸಾಕು ನಾಯಿಯ ದೇಹದ ಸುತ್ತಲೂ ಸುತ್ತಿಕೊಂಡಿದ್ದ ದೈತ್ಯ ಹೆಬ್ಬಾವನ್ನು ಹೊಡೆದೋಡಿಸಲು ಕೋಲುಗಳನ್ನು ಬಳಸುವ ಹುಡುಗರು, ಗಮನ ಸೆಳೆಯುತ್ತಾರೆ. ಒಬ್ಬ ಹುಡುಗ ಹೆಬ್ಬಾವಿನ ಹಿಡಿತದಿಂದ ನಾಯಿಯನ್ನು ಬಿಡಿಸಲು ಪ್ರಯತ್ನಿಸುವುದು ಕಾಣಿಸುತ್ತದೆ. ಉಳಿದ ಇಬ್ಬರು ಹುಡುಗರು ಸಹ ಅತನಿಗೆ ಸಹಾಯ ಮಾಡಿದರು.

ಸ್ವಲ್ಪ ಹೊತ್ತು ಹರಸಾಹಸ ಮಾಡಿ ಕೊನೆಗೆ ಹಾವಿನ ಹಿಡಿತದಿಂದ ನಾಯಿಯನ್ನು ಬಿಡಿಸುವಲ್ಲಿ ಯಶಸ್ವಿಯಾದರು. ನಾಯಿಯು ಯಾವುದೇ ಹಾನಿಯಾಗದಂತೆ ಪಾರಾಗಿದೆ.

ಜಾಲತಾಣದಲ್ಲಿ ಹಂಚಿಕೊಂಡ ನಂತರ ವೀಡಿಯೊ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ನೆಟ್ಟಿಗರು ಈ ಹೋರಾಟದ ವಿಡಿಯೋ ವೀಕ್ಷಿಸಿ ಕಾಮೆಂಟ್ ಮಾಡಿದ್ದಾರೆ.

ಆ ಹುಡುಗರಿಗೆ ಹ್ಯಾಟ್ಸ್ ಆಫ್, ಧೈರ್ಯಶಾಲಿಗಳು ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...