alex Certify ಉತ್ತರಕಾಶಿಯಲ್ಲಿ 3.1 ತೀವ್ರತೆಯ ಭೂಕಂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರಕಾಶಿಯಲ್ಲಿ 3.1 ತೀವ್ರತೆಯ ಭೂಕಂಪ

ಉತ್ತರಾಖಂಡದ ಉತ್ತರಕಾಶಿಯಲ್ಲಿ ಸೋಮವಾರ ಮುಂಜಾನೆ ಭೂಕಂಪನದ ಅನುಭವವಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, 3.1 ತೀವ್ರತೆಯ ಕಂಪನವು 1:50 ರ ಸುಮಾರಿಗೆ ಸಂಭವಿಸಿದೆ.

ಇದರ ಕೇಂದ್ರಬಿಂದುವು ಉತ್ತರಕಾಶಿಯ ಪೂರ್ವ-ಆಗ್ನೇಯಕ್ಕೆ 24 ಕಿಮೀ ದೂರದಲ್ಲಿರುವ ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿ 5 ಕಿಮೀ ಆಳದಲ್ಲಿದೆ.

ನವೆಂಬರ್ 9 ರಂದು 4.5 ತೀವ್ರತೆಯ ಭೂಕಂಪ ಉಂಟಾಗಿತ್ತು. ಕಳೆದ ಒಂದು ದಶಕದಲ್ಲಿ ಗುಡ್ಡಗಾಡು ರಾಜ್ಯವು 700 ಸಣ್ಣ ಭೂಕಂಪಗಳಿಂದ ತತ್ತರಿಸಿದೆ. ವಿಶ್ವದ ಅತ್ಯಂತ ಭೂಕಂಪನಶೀಲವಾಗಿರುವ ಹಿಮಾಲಯದ ಬೆಲ್ಟ್‌ ನಲ್ಲಿ ಆಗಾಗ ಭೂಕಂಪ ಸಂಭವಿಸುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...