ಉತ್ತರಾಖಂಡದ ಉತ್ತರಕಾಶಿಯಲ್ಲಿ ಸೋಮವಾರ ಮುಂಜಾನೆ ಭೂಕಂಪನದ ಅನುಭವವಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, 3.1 ತೀವ್ರತೆಯ ಕಂಪನವು 1:50 ರ ಸುಮಾರಿಗೆ ಸಂಭವಿಸಿದೆ.
ಇದರ ಕೇಂದ್ರಬಿಂದುವು ಉತ್ತರಕಾಶಿಯ ಪೂರ್ವ-ಆಗ್ನೇಯಕ್ಕೆ 24 ಕಿಮೀ ದೂರದಲ್ಲಿರುವ ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿ 5 ಕಿಮೀ ಆಳದಲ್ಲಿದೆ.
ನವೆಂಬರ್ 9 ರಂದು 4.5 ತೀವ್ರತೆಯ ಭೂಕಂಪ ಉಂಟಾಗಿತ್ತು. ಕಳೆದ ಒಂದು ದಶಕದಲ್ಲಿ ಗುಡ್ಡಗಾಡು ರಾಜ್ಯವು 700 ಸಣ್ಣ ಭೂಕಂಪಗಳಿಂದ ತತ್ತರಿಸಿದೆ. ವಿಶ್ವದ ಅತ್ಯಂತ ಭೂಕಂಪನಶೀಲವಾಗಿರುವ ಹಿಮಾಲಯದ ಬೆಲ್ಟ್ ನಲ್ಲಿ ಆಗಾಗ ಭೂಕಂಪ ಸಂಭವಿಸುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ.