alex Certify 3 ಕೇಸ್ ಪತ್ತೆಯಾದ್ರೆ ಇಡೀ ಅಪಾರ್ಟ್‌ಮೆಂಟ್ ಕಂಟೇನ್ಮೆಂಟ್ ಜ಼ೋನ್, ಬಿಬಿಎಂಪಿ ಹೊಸ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ಕೇಸ್ ಪತ್ತೆಯಾದ್ರೆ ಇಡೀ ಅಪಾರ್ಟ್‌ಮೆಂಟ್ ಕಂಟೇನ್ಮೆಂಟ್ ಜ಼ೋನ್, ಬಿಬಿಎಂಪಿ ಹೊಸ ನಿಯಮ

ಕೊರೋನಾ ನಿಯಂತ್ರಿಸಲು ಹಲವು ನಿಯಮಗಳನ್ನ ಹೇರಿರುವ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೌಸಿಂಗ್ ಸೊಸೈಟಿಗಳು, ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್ ಗಳು ಮತ್ತು ಹೌಸಿಂಗ್ ಸೊಸೈಟಿಗಳಿಗೆ ಸಲಹಾ ಸೂಚನೆಯನ್ನು ಕಳುಹಿಸಿದೆ.

ಅಪಾರ್ಟ್‌ಮೆಂಟ್ ನಲ್ಲಿ ಮೂರಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳಿದ್ದಲ್ಲಿ ಸಂಪೂರ್ಣ ಸಂಕೀರ್ಣವನ್ನು ಕನಿಷ್ಠ 7 ದಿನಗಳವರೆಗೆ ‘ಕಂಟೈನ್‌ಮೆಂಟ್ ಝೋನ್’ ಎಂದು ಘೋಷಿಸಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಅಲ್ಲದೇ ಎಲ್ಲಾ ನಿವಾಸಿಗಳನ್ನು ಕಡ್ಡಾಯವಾಗಿ ಪರೀಕ್ಷಿಸುತ್ತೇವೆ, ಜೊತೆಗೆ ವಿವರವಾದ ಸಂಪರ್ಕ ಪತ್ತೆ ಹಚ್ಚುವಿಕೆಗೆ ನಿವಾಸಿಗಳು ಸಹಕರಿಸಬೇಕು ಎಂದು ಹೇಳಿದೆ. ಮುನ್ನೆಚ್ಚರಿಕಾ ಕ್ರಮವಾಗಿ, ಇಲಾಖೆಯ ಕಣ್ಗಾವಲು ಸಹ ಇರುತ್ತದೆ ಎಂದು ಪಾಲಿಕೆ ಎಚ್ಚರಿಕೆ ನೀಡಿದೆ. ವೈರಸ್ ನಿಯಂತ್ರಿಸಲು ನಿವಾಸಿಗಳ ಸಹಕಾರ ಕೋರಿರುವ ಪಾಲಿಕೆ, ಈ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳ ಜೊತೆಗೆ ಹಲವು ಸಲಹೆ ಹಾಗೂ ಸೂಚನೆಗಳನ್ನ ನೀಡಿದೆ.

ಈಗಾಗಲೇ ನಗರದಲ್ಲಿ ಮೂರನೇ ಅಲೆ ಶುರುವಾಗಿದೆ ಎಂದು ತಜ್ಞರು ಹೇಳಿದ್ದು, ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿ ಹಲವಾರು ಕ್ರಮಗಳನ್ನ ಕೈಗೊಳ್ಳುತ್ತಿದೆ. ಇತ್ತ ಕರ್ನಾಟಕ ಸರ್ಕಾರ ಹೆಚ್ಚಾಗುತ್ತಿರೋ ಕೊರೋನಾ ನಿಯಂತ್ರಿಸಲು ನೈಟ್ ಕರ್ಫ್ಯೂ, ವೀಕೆಂಡ್ ಕರ್ಪ್ಯೂ ಜೊತೆಗೆ 1 ರಿಂದ 9ನೇ ತರಗತಿ‌ ಶಾಲೆಗಳನ್ನ ಬಂದ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...