alex Certify BIG SHOCKING NEWS: ದೇಶದಲ್ಲಿ ಕೊರೋನಾದಿಂದ ಮೃತಪಟ್ಟಿದ್ದು 4 ಲಕ್ಷವಲ್ಲ, 49 ಲಕ್ಷ ಜನ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING NEWS: ದೇಶದಲ್ಲಿ ಕೊರೋನಾದಿಂದ ಮೃತಪಟ್ಟಿದ್ದು 4 ಲಕ್ಷವಲ್ಲ, 49 ಲಕ್ಷ ಜನ….?

ನವದೆಹಲಿ: ಕೊರೋನಾ ಸೋಂಕಿನಿಂದ ದೇಶದಲ್ಲಿ 4 ಲಕ್ಷ ಜನ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಆದರೆ, ವರದಿಯ ಪ್ರಕಾರ, ಇದುವರೆಗೆ ಕೊರೋನಾ ಸೋಂಕಿನಿಂದ 34 ರಿಂದ 49 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ದೇಶದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣಿಯನ್ ಸಹ ಲೇಖಕರಾಗಿರುವ ವರದಿ ಮಂಗಳವಾರ ಬಿಡುಗಡೆಯಾಗಿದೆ. ಅಮೆರಿಕ ಮೂಲದ ಗ್ಲೋಬಲ್ ಡೆವಲಪ್ಮೆಂಟ್ ಸಂಸ್ಥೆಯ ಜಸ್ಟಿಸ್ ಸಾಂಡೆಫರ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಅಭಿಷೇಕ್ ಆನಂದ್ ಅವರೊಂದಿಗೆ ತಯಾರಿಸಿದ ವರದಿಯಲ್ಲಿ ಸಾವಿನ ಸಂಖ್ಯೆ ಬಗ್ಗೆ ಉಲ್ಲೇಖಿಸಲಾಗಿದೆ.

ಕೊರೋನಾ ಸೋಂಕಿನಿಂದ ಇಷ್ಟೇ ಮಂದಿ ಮೃತಪಟ್ಟಿದ್ದಾರೆ ಎಂದು ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ಆದರೆ, 2020 ರ ಜನವರಿಯಿಂದ 2021 ರ ಜೂನ್ ಅವಧಿಯಲ್ಲಿ 34 ರಿಂದ 49 ಲಕ್ಷ ಜನ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅಧಿಕೃತವಾಗಿ ನೀಡಲಾದ ಮಾಹಿತಿಗಿಂತ ಸುಮಾರು 40 ಲಕ್ಷಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ನಡೆದ ಮಹಾ ದುರಂತಗಳಿಗಿಂತ ಹೆಚ್ಚಿನ ಪ್ರಮಾಣದ ಸಾವು ಕೊರೊನಾ ಕಾಲದಲ್ಲಿ ಸಂಭವಿಸಿದೆ. ಇದು ನೂರು, ಸಾವಿರ ಲೆಕ್ಕದಲ್ಲಿ ಇಲ್ಲ. ಲಕ್ಷಾಂತರ ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

2021 ರ ಜೂನ್ ಅಂತ್ಯದ ವೇಳೆಗೆ ಭಾರತದ ಅಧಿಕೃತ ಕೋವಿಡ್ -19 ಸಾವಿನ ಸಂಖ್ಯೆ 4,00,000 ಆಗಿತ್ತು. ವಾಸ್ತವದಲ್ಲಿ ಅದಕ್ಕಿಂತ ಹಲವು ಪಟ್ಟು ಹೆಚ್ಚಿನ ಸಾವು ಸಂಭವಿಸಿದೆ ಎಂದು ಜಾಗತಿಕ ಅಭಿವೃದ್ಧಿ ಕೇಂದ್ರ ಸಿದ್ಧಪಡಿಸಿದ ವರದಿಯಲ್ಲಿ ಹೇಳಲಾಗಿದೆ. ‘ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಭಾರತದ ಎಲ್ಲ ಕಾರಣಗಳ ಹೆಚ್ಚುವರಿ ಮರಣದ ಮೂರು ಹೊಸ ಅಂದಾಜುಗಳು’ ಎಂಬ ಶೀರ್ಷಿಕೆಯ ವರದಿಯಲ್ಲಿ ಭಾರತದಲ್ಲಿ ಕೋವಿಡ್ -19 ರ ಎರಡನೇ ಅಲೆ ದೇಶ ವಿಭಜನೆಯ ನಂತರದ(1947 ರಲ್ಲಿ) ಅತ್ಯಂತ ಭೀಕರ ದುರಂತ ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...