ತನ್ನ ಗರ್ಲ್ಫ್ರೆಂಡ್ ಜೊತೆಯಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಸಂದರ್ಭದಲ್ಲಿ 28 ವರ್ಷದ ವ್ಯಕ್ತಿ ಲಾಡ್ಜ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆಯು ನಾಗ್ಪುರ್ ಸಾವೊನೆರ್ನಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಅಜಯ್ ಪರ್ಟೆಕಿ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಅಜಯ್ ಪಾರ್ಟಕಿ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಜಯ್ ಯಾವುದೇ ರೀತಿಯ ಡ್ರಗ್ ಸೇವನೆ ಮಾಡಿರುವ ಬಗ್ಗೆ ಪೊಲೀಸರಿಗೆ ಯಾವುದೇ ಸಾಕ್ಷ್ಯಾಧಾರಗಳು ಲಭಿಸಿಲ್ಲ. ಅಜಯ್ಗೆ ಕಳೆದ ಎರಡು ದಿನಗಳಿಂದ ಜ್ವರವಿತ್ತು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಚಾಲಕರಾಗಿದ್ದ ಅಜಯ್ ವೆಲ್ಡಿಂಗ್ ಕೆಲಸವನ್ನೂ ಮಾಡುತ್ತಿದ್ದರು ಎನ್ನಲಾಗಿದೆ.
ಪಾರ್ಟೆಕಿ ಮತ್ತು ಮಧ್ಯಪ್ರದೇಶದ ಛಿಂದವಾಡದ ನರ್ಸ್ ಆಗಿರುವ 23 ವರ್ಷದ ಮಹಿಳೆ ಕಳೆದ ಮೂರು ವರ್ಷಗಳಿಂದ ಸಂಬಂಧ ಹೊಂದಿದ್ದರು. ಮನೆಯವರಿಗೂ ವಿಷಯ ತಿಳಿದಿತ್ತು. ಇವರಿಬ್ಬರು ಫೇಸ್ ಬುಕ್ ನಲ್ಲಿ ಭೇಟಿಯಾಗಿದ್ದರು. ಪರ್ತೇಕಿ ಮದುವೆಗೆ ಗೆಳತಿಯ ತಾಯಿಯನ್ನೂ ಸಂಪರ್ಕಿಸಿದ್ದ. ಮುಂದಿನ ಕೆಲವು ದಿನಗಳಲ್ಲಿ ಇವರು ಮದುವೆ ಕೂಡ ಆಗುವವರಿದ್ದರು ಎನ್ನಲಾಗಿದೆ.
ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಈ ಜೋಡಿ ಲಾಡ್ಜ್ಗೆ ಭೇಟಿ ನೀಡಿದೆ. ಇಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಅರ್ಧ ಗಂಟೆ ಬಳಿಕ ಅಜಯ್ ಹಾಸಿಗೆ ಮೇಲೆ ಕುಸಿದು ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಯುವತಿ ಲಾಡ್ಜ್ನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಜಯ್ರನ್ನು ಆಸ್ಪತ್ರೆಗೆ ಸಾಗಿಸಲಾಯ್ತಾದರೂ ವೈದ್ಯರು ಇವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.