alex Certify ಗರ್ಲ್​ಫ್ರೆಂಡ್​ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದವನಿಗೆ ಹೃದಯಾಘಾತ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಲ್​ಫ್ರೆಂಡ್​ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದವನಿಗೆ ಹೃದಯಾಘಾತ..!

ತನ್ನ ಗರ್ಲ್​ಫ್ರೆಂಡ್​ ಜೊತೆಯಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಸಂದರ್ಭದಲ್ಲಿ 28 ವರ್ಷದ ವ್ಯಕ್ತಿ ಲಾಡ್ಜ್​​ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆಯು ನಾಗ್ಪುರ್ ಸಾವೊನೆರ್​ನಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಅಜಯ್​ ಪರ್ಟೆಕಿ ಎಂದು ಗುರುತಿಸಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ ಅಜಯ್​ ಪಾರ್ಟಕಿ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಜಯ್​ ಯಾವುದೇ ರೀತಿಯ ಡ್ರಗ್​ ಸೇವನೆ ಮಾಡಿರುವ ಬಗ್ಗೆ ಪೊಲೀಸರಿಗೆ ಯಾವುದೇ ಸಾಕ್ಷ್ಯಾಧಾರಗಳು ಲಭಿಸಿಲ್ಲ. ಅಜಯ್​ಗೆ ಕಳೆದ ಎರಡು ದಿನಗಳಿಂದ ಜ್ವರವಿತ್ತು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಚಾಲಕರಾಗಿದ್ದ ಅಜಯ್​​ ವೆಲ್ಡಿಂಗ್​ ಕೆಲಸವನ್ನೂ ಮಾಡುತ್ತಿದ್ದರು ಎನ್ನಲಾಗಿದೆ.

ಪಾರ್ಟೆಕಿ ಮತ್ತು ಮಧ್ಯಪ್ರದೇಶದ ಛಿಂದವಾಡದ ನರ್ಸ್ ಆಗಿರುವ 23 ವರ್ಷದ ಮಹಿಳೆ ಕಳೆದ ಮೂರು ವರ್ಷಗಳಿಂದ ಸಂಬಂಧ ಹೊಂದಿದ್ದರು. ಮನೆಯವರಿಗೂ ವಿಷಯ ತಿಳಿದಿತ್ತು. ಇವರಿಬ್ಬರು ಫೇಸ್ ಬುಕ್ ನಲ್ಲಿ ಭೇಟಿಯಾಗಿದ್ದರು. ಪರ್ತೇಕಿ ಮದುವೆಗೆ ಗೆಳತಿಯ ತಾಯಿಯನ್ನೂ ಸಂಪರ್ಕಿಸಿದ್ದ. ಮುಂದಿನ ಕೆಲವು ದಿನಗಳಲ್ಲಿ ಇವರು ಮದುವೆ ಕೂಡ ಆಗುವವರಿದ್ದರು ಎನ್ನಲಾಗಿದೆ.

ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಈ ಜೋಡಿ ಲಾಡ್ಜ್​ಗೆ ಭೇಟಿ ನೀಡಿದೆ. ಇಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಅರ್ಧ ಗಂಟೆ ಬಳಿಕ ಅಜಯ್​ ಹಾಸಿಗೆ ಮೇಲೆ ಕುಸಿದು ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಯುವತಿ ಲಾಡ್ಜ್​ನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಜಯ್​​ರನ್ನು ಆಸ್ಪತ್ರೆಗೆ ಸಾಗಿಸಲಾಯ್ತಾದರೂ ವೈದ್ಯರು ಇವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...