alex Certify ಗುಜರಾತ್ ಕೆಮಿಕಲ್ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ; 28 ಮಂದಿ ಅಸ್ವಸ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಜರಾತ್ ಕೆಮಿಕಲ್ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ; 28 ಮಂದಿ ಅಸ್ವಸ್ಥ

ಗುಜರಾತ್‌ ನ ಭರೂಚ್ ಜಿಲ್ಲೆಯ ಜಂಬೂಸರ್ ಬಳಿಯ ರಾಸಾಯನಿಕ ಕಾರ್ಖಾನೆಯಲ್ಲಿ ಬುಧವಾರ ಸೋರಿಕೆಯಾದ ವಿಷಕಾರಿ ಗಾಳಿ ಉಸಿರಾಡಿದ ನಂತರ ಕನಿಷ್ಠ 28 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯ ಸರೋದ್ ಗ್ರಾಮದ ಪಿಐ ಇಂಡಸ್ಟ್ರೀಸ್‌ನಲ್ಲಿನ ಟ್ಯಾಂಕ್‌ ನಲ್ಲಿ ಸಂಭವಿಸಿದ ಬೆಂಕಿಯಿಂದಾಗಿ ಸೋರಿಕೆಯಾದ ಬ್ರೋಮಿನ್ ಅನಿಲ ಉಸಿರಾಡಿದ ನಂತರ ಸಂತ್ರಸ್ತ ಜನರು ಉಸಿರಾಟದ ತೊಂದರೆಯಾದ ದೂರಿದ್ದಾರೆ ಎಂದು ಭರೂಚ್ ನಿವಾಸಿ ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ಆರ್. ಧಾಂಧಲ್ ಹೇಳಿದ್ದಾರೆ.

ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅನಿಲ ಸೋರಿಕೆಯಾದ ವರದಿಯಾದಾಗ ಕಾರ್ಖಾನೆಯಲ್ಲಿ ಸುಮಾರು 2,000 ಕಾರ್ಮಿಕರು ಇದ್ದರು. ಎಲ್ಲರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವೇದಾಚ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವೈಶಾಲಿ ಅಹಿರ್ ತಿಳಿಸಿದ್ದಾರೆ.

ಟ್ಯಾಂಕ್ ಬಳಿ ಇದ್ದ ಕಾರ್ಮಿಕರು ಆರೋಗ್ಯ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋರಿಕೆ ನಿಯಂತ್ರಿಸಲಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...