ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಬಹು ನಿರೀಕ್ಷೆಯ ‘ಸರ್ಕಾರು ವಾರಿಪಾಟ’ ಚಿತ್ರದ ಟೀಸರ್ ಅನ್ನು ಆಗಸ್ಟ್ 9 ಮಹೇಶ್ ಬಾಬು ಹುಟ್ಟುಹಬ್ಬದ ಪ್ರಯುಕ್ತ ಮೈತ್ರಿ ಮೂವಿ ಮೇಕರ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು.
ಮಹೇಶ್ ಬಾಬು ಲುಕ್ ಹಾಗೂ ಡೈಲಾಗ್ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಈ ಟೀಸರ್ ರಿಲೀಸ್ ಆದ 24 ಗಂಟೆಗಳಲ್ಲಿ 25.7 ಮಿಲಿಯನ್ ವೀಕ್ಷಣೆ ಪಡೆದು ಟಾಲಿವುಡ್ ನಲ್ಲೇ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಟೀಸರ್ ಎಂಬ ದಾಖಲೆ ಬರೆದಿತ್ತು. ಇದೀಗ 28 ಮಿಲಿಯನ್ ವೀವ್ಸ್ ಪಡೆದು ಭರ್ಜರಿಯಾಗಿ ಮುನ್ನುಗ್ಗುತ್ತಲೇ ಇದೆ.
ಆಗಸ್ಟ್ 15 ರಂದು ಉಚಿತ ಪೆಟ್ರೋಲ್; ಆಧಾರ್ ಕಾರ್ಡ್ ತೋರಿಸಿ 5 ಲೀಟರ್ ತೈಲ ಪಡೆಯಲು ಆಫರ್
ಪರಶುರಾಂ ನಿರ್ದೇಶನದ ಈ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಎಸ್ ತಮನ್ ಸಂಗೀತವಿದೆ. ಮುಂದಿನ ವರ್ಷ ಜನವರಿ 13ರಂದು ಈ ಸಿನಿಮಾ ತೆರೆ ಮೇಲೆ ಬರಲಿದೆ. ಮೈತ್ರಿ ಮೂವಿ ಮೇಕರ್ಸ್, 14 ರೀಲ್ ಪ್ಲಸ್ ಹಾಗೂ ಮಹೇಶ್ ಬಾಬು ಎಂಟರ್ಟೇನ್ಮೆಂಟ್ ನಿಂದ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ.
https://www.youtube.com/watch?v=2cVu7KZxW3c&t=11s