
ಹೌದು, ಬಹಳ ವಿರಳ ಸನ್ನಿವೇಶಗಳಲ್ಲಿ 2ನೇ ಮದುವೆ, 3ನೇ ಮದುವೆ ಬಗ್ಗೆ ಕೇಳಿರ್ತೀರಾ. ಆದರೆ, ಇಲ್ಲೊಬ್ಬ ವೃದ್ಧ ತನ್ನ 28 ಪತ್ನಿಯರು, 35 ಮಕ್ಕಳು ಹಾಗೂ 126 ಮೊಮ್ಮಕ್ಕಳ ಸಮ್ಮುಖದಲ್ಲಿ 37ನೇ ಪತ್ನಿಯನ್ನು ವಿವಾಹವಾಗಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ತಿಳಿದಿಲ್ಲ. ಕಳೆದ ವರ್ಷ ಜೂನ್‌ನಲ್ಲಿ ವೈರಲ್ ಆಗಿದ್ದ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಎಂತಹ ಅದೃಷ್ಟವಂತ ಈತ……. ಇಲ್ಲಿ ಒಬ್ಬಾಕೆಯನ್ನೇ ನಿಭಾಯಿಸುವುದು ಕಷ್ಟವಿರುವಾಗ ಈತ ಇಷ್ಟೊಂದು ಮದುವೆಯಾಗಿದ್ದು ಅದ್ಭುತವೇ ಸರಿ ಅಂತೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.