ಯುವಕನೊಬ್ಬ ಜಿಮ್ ನಲ್ಲಿ ವರ್ಕೌಟ್ ಮಾಡಿದ ಬಳಿಕ ಕುಸಿದುಬಿದ್ದಿದ್ದು, ಕೂಡಲೇ ಆತನನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ.
ಘಟನೆ ತಮಿಳುನಾಡಿನ ಮಧುರೈ ಪಾಲಂಗಂಟಂ ನಲ್ಲಿ ನಡೆದಿದ್ದು, 27 ವರ್ಷದ ಶ್ರೀ ವಿಷ್ಣು ಮೃತ ಯುವಕ. ಜೂನ್4ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
‘ವಿದ್ಯಾವಂತೆ’ ಎಂಬ ಕಾರಣಕ್ಕೆ ಮಹಿಳೆಯನ್ನು ಜೀವನೋಪಾಯಕ್ಕೆ ದುಡಿಯುವಂತೆ ಬಲವಂತ ಮಾಡುವಂತಿಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯ
ಈತ ರಾತ್ರಿ 8.30 ರ ವರೆಗೆ ಕೆಲಸ ಮಾಡಿ 9 ಗಂಟೆ ಸುಮಾರಿಗೆ ಜಿಮ್ ಗೆ ತೆರಳಿದ್ದ ಎನ್ನಲಾಗಿದೆ. ವರ್ಕೌಟ್ ಮಾಡಿದ ಸ್ವಲ್ಪ ಸಮಯದ ಬಳಿಕ ಆತ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಮಗನಿಗೆ ಯಾವುದೇ ದುರಭ್ಯಾಸಗಳು ಇರಲಿಲ್ಲ ಎಂದು ಆತನ ತಂದೆ ಕಮಲೇಶ್ವರ್ ತಿಳಿಸಿದ್ದಾರೆ.