alex Certify 25 ದಿನ ಪೂರೈಸಿದ ʼಲವ್ 360ʼ ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

25 ದಿನ ಪೂರೈಸಿದ ʼಲವ್ 360ʼ ಚಿತ್ರ

ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರ ಆಗಸ್ಟ್ 19ರಂದು ರಾಜ್ಯಾದ್ಯಂತ ತೆರೆ ಕಂಡಿದ್ದು  ಬಿಡುಗಡೆಯಾದಾಗಿನಿಂದ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಟಾಲಿವುಡ್ ನ ಖ್ಯಾತ ಗಾಯಕ ಸಿದ್ಧ್ ಶ್ರೀರಾಮ್ ಧ್ವನಿಯಿಂದ ಮೂಡಿಬಂದಿದ್ದ ‘ಜಗವೇ ನೀನು ಗೆಳತಿಯೇ’ ಹಾಡು ಪ್ರೇಕ್ಷಕರ ಬಾಯಲ್ಲಿ ನಲಿದಾಡುತ್ತಲೇ ಇದೆ. ರೊಮ್ಯಾಂಟಿಕ್ ಲವ್ ಸ್ಟೋರಿ ಆಧಾರಿತ ಈ ಸಿನಿಮಾ ಇದೀಗ ಇಪ್ಪತ್ತೈದು ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ.

ಈ ಚಿತ್ರದಲ್ಲಿ ಪ್ರವೀಣ್ ಹಾಗೂ ರಚನಾ ಇಂದರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಶಾಂಕ್ ಸಿನಿಮಾಸ್ ಬ್ಯಾನರ್ ನಡಿ ಶಶಾಂಕ್ ಹಾಗೂ ಮಂಜುಳಾ ಮೂರ್ತಿ ಬಂಡವಾಳ ಹೂಡಿದ್ದು  ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ  ಸಂಗೀತ ಸಂಯೋಜನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...