ಗುರುವಾರ ಈ ಘಟನೆ ಸಂಭವಿಸಿದ್ದು ತೆಲ್ಹುವಾ ಗ್ರಾಮದಲ್ಲಿ ಮದ್ಯ ಸೇವನೆ ಮಾಡುತ್ತಿದ್ದಂತೆಯೇ 8 ಮಂದಿ ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಇನ್ನೂ 16 ಮಂದಿ ಸಾವನ್ನಪ್ಪಿದ್ದರು ಸಾವಿನ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೂ ಈ ಘಟನೆಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಅಂದಹಾಗೆ ಈ ರೀತಿ ಮದ್ಯ ಕುಡಿದು ಸಾವನ್ನಪ್ಪಿದ ಪೈಕಿ ಕಳೆದ 10 ದಿನಗಳಲ್ಲಿ ಉತ್ತರ ಬಿಹಾರದಲ್ಲಿ ನಡೆದ ಮೂರನೇ ಘಟನೆ ಇದಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಬಿಹಾರದ ಸಚಿವ ಜನಕ್ ರಾಮ್ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ರು. ಮದ್ಯಪಾನ ಸೇವಿಸಿ ಸಾವನ್ನಪ್ಪಿದವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದೇನೆ. ಇದು ಎನ್ಡಿಎ ಸರ್ಕಾರಕ್ಕೆ ಮಸಿ ಬಳಿಯಲು ಮಾಡಿದ ಕುತಂತ್ರವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿದ ಗೋಪಾಲಗಂಜ್ ಪೊಲೀಸ್ ಅಧಿಕಾರಿ ಆನಂದ ಕುಮಾರ್, ಮುಹಾಮ್ಮದ್ಪುರ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ನಿಗೂಢ ಸಾವು ಸಂಭವಿಸುತ್ತಿದೆ. ಈ ಎಲ್ಲಾ ಸಾವಿಗೆ ನಿಖರ ಕಾರಣ ಏನು ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ. ಪೊಲೀಸರು ಮೂರು ವಿಶೇಷ ತಂಡವನ್ನ ರಚಿಸಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ರು.