ನಮ್ಮಿಬ್ಬರ ನಡುವಿನ ವಯಸ್ಸಿನಲ್ಲಿ 37 ವರ್ಷಗಳ ಅಂತರವಿದ್ದರೂ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಪ್ರೇಮಿಗಳಿಬ್ಬರು ಹೇಳಿಕೊಂಡಿದ್ದು ಈ ಮೂಲಕ ಟ್ರೋಲಿಗರ ಬಾಯಿಯನ್ನ ಮುಚ್ಚಿಸಿದ್ದಾರೆ.
ಅಮೆರಿಕ ಮೂಲದ 23 ವರ್ಷದ ಕ್ವಾರನ್ ಹಾಗೂ ಆತನ ಗರ್ಲ್ಫ್ರೆಂಡ್ 60 ವರ್ಷದ ಚೆರ್ಲ್ ಎಂಬವರು ಟಿಕ್ಟಾಕ್ನಲ್ಲಿ ಸದಾ ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋಗಳನ್ನೇ ಶೇರ್ ಮಾಡುತ್ತಿದ್ದರು.
ಒಬ್ಬರಿಗೊಬ್ಬರು ಕಿಸ್ ಮಾಡುತ್ತಾ, ಮುದ್ದು ಮಾಡುತ್ತಾ ಹಾಗೂ ಡ್ಯಾನ್ಸ್ ಮಾಡುತ್ತಿರುವ ವಿಡಿಯೋಗಳನ್ನ ಈ ಜೋಡಿ ಟಿಕ್ಟಾಕ್ನಲ್ಲಿ ಶೇರ್ ಮಾಡುತ್ತಿತ್ತು. ಇದನ್ನ ನೋಡಿದ ಪ್ರೇಕ್ಷಕರೊಬ್ಬರು ನೀವು ನಿಮ್ಮ ಕುಟುಂಬದವರ ಒಪ್ಪಿಗೆ ಪಡೆದೇ ಈ ರೀತಿ ಮಾಡ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು.
ಈ ಪ್ರಶ್ನೆಗೆ ವಿಡಿಯೋ ಮೂಲಕ ಉತ್ತರ ನೀಡಿದ ಈ ಜೋಡಿ, ಹೌದು…..ನಮ್ಮ ಕುಟುಂಬಸ್ಥರಿಗೆ ನಮ್ಮ ಪ್ರೀತಿಯ ವಿಚಾರ ತಿಳಿದಿದೆ ಎಂದು ಹೇಳಿದೆ. ಅಂದಹಾಗೆ ಚೆರ್ಲಿಗೆ ಕ್ವಾರನ್ಗಿಂತಲೂ ಹೆಚ್ಚಿನ ವಯಸ್ಸಿನ ಮಕ್ಕಳಿದ್ದಾರಂತೆ. ಅವರೂ ಸಹ ಈ ಸಂಬಂಧದಿಂದ ಖುಷಿಯಾಗಿದ್ದಾರಂತೆ.
ತಮ್ಮ ಸಂಬಂಧದ ಬಗ್ಗೆ ಸದಾ ನೆಗೆಟಿವ್ ಕಮೆಂಟ್ಗಳನ್ನೇ ಈ ಜೋಡಿ ಸ್ವೀಕರಿಸುತ್ತಿದ್ದರು. ಅನೇಕರು ನೀವಿಬ್ಬರು ಅಜ್ಜಿ ಮೊಮ್ಮಗನಂತೆ ಕಾಣುತ್ತೀರಾ ಎಂದೆಲ್ಲ ಹೇಳುತ್ತಿದ್ದರು. ಅಲ್ಲದೇ ಇನ್ನೂ ಹಲವರು ಆಕೆಯ ಶ್ರೀಮಂತಿಕೆ ನೋಡಿ ಈತ ಪ್ರೀತಿಯ ನಾಟಕವಾಡುತ್ತಿದ್ದಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು.
ಈ ಎಲ್ಲಾ ಪ್ರಶ್ನೆಗಳಿಗೆ ಇನ್ಸ್ಟಾಗ್ರಾಂ ಲೈವ್ ಮೂಲಕ ಉತ್ತರ ನೀಡಿದ ಈ ಜೋಡಿ, ನೀವು ನಮ್ಮನ್ನ ಈ ರೀತಿ ಜಡ್ಜ್ ಮಾಡೋದು ಸರಿಯಲ್ಲ. ವಯಸ್ಸಿನ ಅಂತರದಿಂದ ಪ್ರೀತಿಯನ್ನ ಅಳೆಯೋದಕ್ಕೆ ಆಗೋದಿಲ್ಲ. ವಯಸ್ಸು ಅನ್ನೋದು ಕೇವಲ ಸಂಖ್ಯೆ ಮಾತ್ರ. ನಾವು ಯಾವುದೇ ತಪ್ಪು ಕೆಲಸವನ್ನ ಮಾಡುತ್ತಿಲ್ಲ. ಅವನು ನನ್ನನ್ನ ಚೆನ್ನಾಗಿ ನೋಡಿಕೊಳ್ತಿದ್ದಾನೆ. ನಾನು ಕೂಡ ಆತನನ್ನ ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾರೆ.