
ಸೆಲ್ಫೀ ಗೀಳಿನ ವೈಪರಿತ್ಯದ ನಿದರ್ಶನವೊಂದರಲ್ಲಿ, ಟರ್ಕಿಯ 21 ವರ್ಷ ವರ್ಷದ ಮಹಿಳೆಯೊಬ್ಬರು ಸೆಲ್ಫೀ ತೆಗೆಯವ ವೇಳೆ 164 ಅಡಿ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಹಟಿಸ್ ನೂರ್ ಕರಾಬುಲುಟ್ ಹೆಸರಿನ ಈ ಮಹಿಳೆಗೆ ಸೆಲ್ಫೀ ತೆಗೆಯುತ್ತಿದ್ದ ಸಂದರ್ಭ ಕಾಲು ಜಾರಿ ಈ ಅವಘಡ ಸಂಭವಿಸಿದೆ. ತನ್ನಿಚ್ಛೆಯಂತೆಯೇ ಸೆಲ್ಫೀ ಬರಬೇಕೆನ್ನುವನ ಹುಚ್ಚು ಹಟದಿಂದ ಹಟಿಸ್ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಎದೆ ನಡುಗಿಸುತ್ತೆ ಸೈನಿಕರು ಮಾಡಿರುವ ಸಾಹಸದ ವಿಡಿಯೋ
ಟರ್ಕಿಯ ಅಡಾನಾ ಪ್ರಾಂತ್ಯದಲ್ಲಿ ಈ ಘಟನೆ ಜರುಗಿದೆ. ಇಲ್ಲಿನ ಕರಾಯ್ಸಿಲಿ ಜಿಲ್ಲೆಯ ಹಸಿಕಿರಿ ಎಂಬ ಊರಿನಲ್ಲಿ ಈ ಘಟನೆ ಜರುಗಿದೆ. ತನ್ನ ಸಹೋದರಿ ಮಜ್ಲುಂ ಸೊಜ಼ೇರಿಯೊಂದಿಗೆ ಪ್ರಖ್ಯಾತ ವಾರ್ದಾ ಸ್ಥಂಬದವನ್ನು ಸೆಲ್ಫೀಯಲ್ಲಿ ಕವರ್ ಮಾಡಲು ಹೋದ ವೇಳೆ ಈ ಅನಾಹುತ ಸಂಭವಿಸಿದೆ.
ತನ್ನ ಸಹೋದರಿ ಹಾಟಿಸ್‌ಳನ್ನು ರಕ್ಷಿಸುವ ಯುತ್ನದಲ್ಲಿ ಮಜ್ಲೂಂ ಸಹ ಕೆಳಗೆ ಬಿದ್ದಿದ್ದು, ಗಂಭೀರ ಗಾಯಗಳನ್ನು ಮಾಡಿಕೊಂಡಿದ್ದಾರೆ. ರಕ್ಷಣಾ ಕಾರ್ಯಕರ್ತರು ಹಾಟಿಸ್‌ಳ ಸಹೋದರಿಯನ್ನು ರಕ್ಷಿಸಿದ್ದಾರೆ.