alex Certify ಭಾರತದಲ್ಲಿ ಬಿಡುಗಡೆಯಾದ ಹ್ಯುಂಡೈ ಔರಾ: ಇಲ್ಲಿದೆ ಬೆಲೆ ಹಾಗೂ ಅದರ ವಿಶೇಷತೆ ಕುರಿತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಬಿಡುಗಡೆಯಾದ ಹ್ಯುಂಡೈ ಔರಾ: ಇಲ್ಲಿದೆ ಬೆಲೆ ಹಾಗೂ ಅದರ ವಿಶೇಷತೆ ಕುರಿತ ಮಾಹಿತಿ

ವಾಹನ ಪ್ರಿಯರಿಗೆ ಗುಡ್​ ನ್ಯೂಸ್​ ಕೊಟ್ಟಿದೆ ಹ್ಯುಂಡೈ. ಭಾರತದಲ್ಲಿ ಬಹುನಿರೀಕ್ಷಿತ ‘ಔರಾ ಫೇಸ್‌ಲಿಫ್ಟ್’ ಆವೃತ್ತಿಯನ್ನು ಕಂಪೆನಿ ಬಿಡುಗಡೆ ಮಾಡಿದೆ. ಈ ತಿಂಗಳ ಆರಂಭದಲ್ಲಿಯೇ ಔರಾ ಫೇಸ್‌ಲಿಫ್ಟ್ ಆವೃತ್ತಿಗಾಗಿ ರೂ.11,000 ಟೋಕನ್ ಮೊತ್ತಕ್ಕೆ ಬುಕಿಂಗ್ ಶುರುವಾಗಿತ್ತು. ಇದರ ಪೆಟ್ರೋಲ್ ಇ ವೇರಿಯಂಟ್‌ ಬೆಲೆ 6.29 ಲಕ್ಷ ರೂ.ಗಳಿಂದ ಪ್ರಾರಂಭವಾಗಲಿದ್ದು, ಸಿಎನ್‌ಜಿ ಎಸ್‌ಎಕ್ಸ್ ವೇರಿಯಂಟ್‌ ಬೆಲೆ 8.87 ಲಕ್ಷ ರೂಪಾಯಿಗಳು.

ಔರಾ ಫೇಸ್‌ಲಿಫ್ಟ್ ಬಹುತೇಕ ಹಿಂದಿನ ಮಾದರಿಗೆ ಹೋಲುತ್ತದೆ. ಬೇಸ್ ರೂಪಾಂತರ ಹೊರತುಪಡಿಸಿ, ಬೇರೆಲ್ಲ ಮಾದರಿಗಳು ಬೂಟ್-ಲಿಡ್ ಸ್ಪಾಯ್ಲರ್ ಅನ್ನು ಹೊಂದಿವೆ. ಒಳಭಾಗದ ಕ್ಯಾಬಿನ್ ವಿನ್ಯಾಸವು ಬದಲಾಗಿಲ್ಲ. ಲೆದರ್ ಸುತ್ತಿರುವ ಸ್ಟೀರಿಂಗ್ ವೀಲ್ ಇದೆ.

ಆದರೆ ಫ್ರಂಟ್ ಡಿಸೈನ್ ಇನ್ನಷ್ಟು ಆಕರ್ಷಕವಾಗಿದೆ. ಈ ಕಾಂಪ್ಯಾಕ್ಟ್ ಸೆಡಾನ್ ನಲ್ಲಿ ಎಲ್-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಬಂಪರ್‌ನ ಅಂಚಿನಲ್ಲಿ ಇರುವಂತೆ ವಿನ್ಯಾಸ ಮಾಡಲಾಗಿದೆ. 15-ಇಂಚಿನ ಅಲಾಯ್ ವೀಲ್ಸ್ ಮತ್ತು LED ಟೈಲ್-ಲೈಟ್‌ಗಳನ್ನು ಹೊಂದಿದೆ. ಜೊತೆಗೆ ಸೈಡ್ ಅಥವಾ ರೇರ್ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

ಹಿಂದಿನ ಮಾದರಿಯಂತೆ 1.2-ಲೀಟರ್ ಪೆಟ್ರೋಲ್ ಎಂಜಿನ್‌ ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್‌ ಕ್ಸ್‌ಗೆ ಜೋಡಿಸಲಾಗಿದೆ. ಇದು 83 hp ಗರಿಷ್ಠ ಪವರ್ ಮತ್ತು 113.8 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...