alex Certify Renault Kwid hatchback: ಕಾರಿನ ಫೀಚರ್ಸ್‌ ಉತ್ತಮ, ಬೆಲೆ ಮಧ್ಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Renault Kwid hatchback: ಕಾರಿನ ಫೀಚರ್ಸ್‌ ಉತ್ತಮ, ಬೆಲೆ ಮಧ್ಯಮ

ದೇಶದಲ್ಲಿ ಕೊರೊನಾ ಹಾಗೂ ಅದರ ರೂಪಾಂತರಿಗಳು ತಂದೊಡ್ಡಿದ್ದ ಬಿಕ್ಕಟ್ಟು ಶಮನವಾಗಿ, ಮಾರುಕಟ್ಟೆ ಲಯ ಕಂಡುಕೊಳ್ಳುತ್ತಿರುವುದನ್ನು ಚೆನ್ನಾಗಿ ಅರಿತ ಖ್ಯಾತ ಕಾರು ಉತ್ಪಾದನೆ ಸಂಸ್ಥೆ ರೆನಾಲ್ಟ್‌ ಇಂಡಿಯಾ ಈಗ ಹೊಸ ಕಾರನ್ನು ಮಾರುಕಟ್ಟೆಗೆ ಬಿಟ್ಟಿದೆ. ರೆನಾಲ್ಟ್‌ ಎಂವೈ 2022 ಕ್ವಿಡ್‌ ಎಂಬ ಕಾರು ಇದಾಗಿದ್ದು, ಹಲವು ರೂಪಾಂತರಗಳನ್ನು ಮಾಡಲಾಗಿರುವುದರಿಂದ ಹೆಚ್ಚು ಸದ್ದು ಮಾಡುತ್ತಿದೆ.

ಹೊಸ ಕಾರು 800 ಸಿಸಿ ಎಂಜಿನ್‌ ಹೊಂದಿದ್ದು, ಇಂಟಿರಿಯರ್‌ ಹಾಗೂ ಎಕ್ಸ್‌ಟೀರಿಯರ್‌ ಆಗಿ ಬೇರೆ ಬೇರೆ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕಾರಿನ ಒಳಗೆ ಎಂಟು ಇಂಚಿನ ಟಚ್‌ಸ್ಕ್ರೀನ್‌ ಮೀಡಿಯಾನಾವ್‌ ಎವೊಲೂಷನ್‌ ಇನ್ಫೋಟೇನ್‌ಮೆಂಟ್‌ ಸಿಸ್ಟಂ ಇದ್ದು, ಇದಕ್ಕೆ ಆ್ಯಂಡ್ರಾಯ್ಡ್‌ ಆಟೋ, ಆ್ಯಪಲ್‌ ಕಾರ್‌ಪ್ಲೇ, ವೀಡಿಯೊ ಪ್ಲೇಬ್ಯಾಕ್‌ ಹಾಗೂ ವಾಯ್ಸ್‌ ರೆಕಗ್ನಿಷನ್‌ ಸಪೋರ್ಟ್‌ ಇದೆ. ಇದರಿಂದ ವಾಹನ ಚಾಲಕರು ಸುಲಭವಾಗಿ ವಾಹನ ಚಾಲನೆ ಮಾಡಬಹುದಾಗಿದೆ.

2021 ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು ಗೊತ್ತಾ….?

ಸುರಕ್ಷತೆಗೂ ಆದ್ಯತೆ ನೀಡಿರುವ ಕಂಪನಿಯು ಮುಂಭಾಗದಲ್ಲಿ ಎರಡು ಏರ್‌ಬ್ಯಾಗ್‌ಗಳನ್ನು ಅಳವಡಿಸಿದೆ. ಸೀಟ್‌ ಬೆಲ್ಟ್‌ ರಿಮೈಂಡರ್‌, ಓವರ್‌ ಸ್ಪೀಡ್‌ ಅಲರ್ಟ್‌, ರಿವರ್ಸ್‌ ಪಾರ್ಕಿಂಗ್‌ ಸೆನ್ಸಾರ್‌ ಸೇರಿ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ನೀಡಲಾಗಿದೆ.

ಭಾರತದಲ್ಲಿ ಮೊದಲು 2015ರಲ್ಲಿ ರೆನಾಲ್ಟ್‌ ಕಂಪನಿಯು ಕ್ವಿಡ್‌ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಿದ್ದು, ಇದುವರೆಗೆ ನಾಲ್ಕು ಲಕ್ಷ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಾಗಾಗಿ ಅದು ಮತ್ತಷ್ಟು ಗ್ರಾಹಕರನ್ನು ಸೆಳೆಯುವ ದಿಸೆಯಲ್ಲಿ ಹಲವಾರು ಹೊಚ್ಚ ಹೊಸ ಫೀಚರ್‌ಗಳೊಂದಿಗೆ ಹೊಸ ಮಾದರಿಯ ಕಾರು ಮಾರುಕಟ್ಟೆಗೆ ಬಿಟ್ಟಿದೆ. ಅಂದಹಾಗೆ, ಈ ನವೀನ ಕಾರಿನ ಬೆಲೆ 4.49 ಲಕ್ಷ ರೂಪಾಯಿ ಆಗಿದ್ದು, ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಜನರು ಸಹ ಖರೀದಿ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...