ಬಹಳ ಜನಪ್ರಿಯವಾಗಿರುವ ತನ್ನ ಪಿಕ್‌ಅಪ್ ಟ್ರಕ್ ರೇಂಜರ್‌ನ ಹೊಸ-ತಲೆಮಾರಿನ ಅವತಾರವನ್ನು ಫೋರ್ಡ್ ಬಿಡುಗಡೆ ಮಾಡಿದೆ. ತನ್ನ ಪೂರ್ವಜ ಎಂಡೀವರ್‌ನ ಮುಖನೋಟ ಹಾಗೂ ವಿನ್ಯಾಸಕ್ಕಿಂತ ಭಿನ್ನವಾಗಿ 2022ರ ಫೋರ್ಡ್ ರೇಂಜರ್ ಹೊರಬಂದಿದೆ.
ಈ ಹೊಸ ಎಸ್‌ಯುವಿಯನ್ನು ಫೋರ್ಡ್ ಆಸ್ಟ್ರೇಲಿಯಾ ಮೊದಲಿಗೆ ಬಿಡುಗಡೆ ಮಾಡಿದೆ. ಇದೇ ಮಾಡೆಲ್ ಶೀಘ್ರದಲ್ಲೇ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಹಿಂದೆ ಇದ್ದದ್ದಕ್ಕಿಂತಲೂ 50ಎಂಎಂ ಅಗಲವಾಗಿರುವ ಈ ಟ್ರಕ್, ಚಕ್ರದ ಬೇಸ್‌ನಲ್ಲೂ ಸಹ 50ಎಂಎಂ ವಿಸ್ತರಣೆ ಪಡೆದಿದೆ. ಟ್ರಕ್‌ನ ಮುಂಭಾಗದ ಗ್ರಿಲ್ ಇನ್ನಷ್ಟು ಅಗಲವಾಗಿದ್ದು, ಮ್ಯಾಟ್ರಿಕ್ಸ್ ಎಲ್‌ಇಡಿ ದೀಪ ಹೊಂದಿದೆ.
ಹಿಂಭಾಗದಲ್ಲಿ ವಾಹನದ ಸರಕು ಹೊರುವ ಸ್ಥಳವನ್ನು ಇನ್ನಷ್ಟು ವಿಸ್ತರಿಸಿದೆ ಫೋರ್ಡ್. ಟೇಲ್ ಲ್ಯಾಂಪ್‌ಗೆ ಎಲ್‌ಇಡಿ ಘಟಕ ಅಳವಡಿಸಲಾಗಿದ್ದು, ಅದರ ಮೇಲೆ ರೇಂಜರ್ ಲೋಗೋ ನೀಡಲಾಗಿದೆ.
ಮುಂದಿನ ವರ್ಷ ಮಕ್ಕಳಿಗೆ ಸಿಕ್ತಿಗೆ ಇಷ್ಟೊಂದು ʼರಜೆʼ
ಟ್ರಕ್‌ನ ಒಳಭಾಗದಲ್ಲೂ ಸಹ ಸುಧಾರಣೆಗಳು ಆಗಿದ್ದು, ಇನ್ನಷ್ಟು ದೊಡ್ಡ ಕ್ಯಾಬಿನ್ ಕೊಡಲಾಗಿದೆ. 12 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ವ್ಯವಸ್ಥೆ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಎಲೆಕ್ಟ್ರಾನಿಕ್ ’ಶಾರ್ಟ್ ಥ್ರೋ ಗೇರ್’ ಸೆಲೆಕ್ಟರ್‌ಗಳೆಂಬ ಆಕರ್ಷಕ ಫೀಚರ್‌ಗಳನ್ನು ಇದೇ ವೇಳೆ ವಾಹನದಲ್ಲಿ ಒದಗಿಸಲಾಗಿದೆ.
ಫೋರ್ಡ್ ಪಾಸ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ಕ್ಯಾಬಿನ್‌ನ ಹೊರಮುಖದ ದೀಪದ ವ್ಯವಸ್ಥೆಯನ್ನು ನಿರ್ವಹಿಸಬಹುದಾಗಿದೆ.
ಸದ್ಯಕ್ಕೆ ಆಸ್ಟ್ರೇಲಿಯನ್ ಮಾರುಕಟ್ಟೆಯಲ್ಲಿರುವ ಈ ವಾಹನದ ಬೆಲೆಯು ಭಾರತೀಯ ರೂಪಾಯಿಗೆ ಹೋಲಿಕೆ ಮಾಡಿದಾಗ 29-40 ಲಕ್ಷ ರೂ.ಗಳಷ್ಟಿದೆ. ಆದರೆ ಭಾರತೀಯ ಮಾರುಕಟ್ಟೆಯಿಂದ ಫೋರ್ಡ್ ನಿರ್ಗಮಿಸಿದ ಕಾರಣ ಟ್ರಕ್ ಭಾರತಕ್ಕೆ ಆಗಮಿಸುವ ಸಾಧ್ಯತೆ ಇಲ್ಲ.