alex Certify 2021 ರಲ್ಲಿ ಮಾಡಿದ ತಪ್ಪನ್ನೇ ಮೂರನೆ ಅಲೆಯಲ್ಲಿಯೂ ಮಾಡಬೇಡಿ: ಸರ್ಕಾರಗಳಿಗೆ ತಜ್ಞ ವೈದ್ಯರ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2021 ರಲ್ಲಿ ಮಾಡಿದ ತಪ್ಪನ್ನೇ ಮೂರನೆ ಅಲೆಯಲ್ಲಿಯೂ ಮಾಡಬೇಡಿ: ಸರ್ಕಾರಗಳಿಗೆ ತಜ್ಞ ವೈದ್ಯರ ಸಲಹೆ

ಭಾರತದ ಹಾಗೂ ವಿದೇಶಗಳ ಹಿರಿಯ ವೈದ್ಯರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪ್ರಸ್ತುತ ಕೋವಿಡ್​ 19 ಪರಿಸ್ಥಿತಿಯನ್ನು ನಿಭಾಯಿಸಲು ಆಯ್ಕೆ ಮಾಡಿಕೊಂಡಿರುವ ಕೆಲವು ಅಸಮಂಜಸ ವೈದ್ಯಕೀಯ ವಿಧಾನಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಬಹಿರಂಗ ಪತ್ರವೊಂದರಲ್ಲಿ 32 ಪ್ರಮುಖ ವೈದ್ಯರು ಕೋವಿಡ್​ 19 ಕ್ಲಿನಿಕಲ್​ ನಿರ್ವಹಣೆಯ ಸಮಯದಲ್ಲಿ 2021ರಲ್ಲಿ ಮಾಡಲಾದ ತಪ್ಪುಗಳನ್ನೇ ಪುನರಾವರ್ತಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಹಿಂದಿನ 2 ಅಲೆಗಳನ್ನು ನೋಡಿದರೆ ಔಷಧಿಗಳ ವಿನಾಕಾರಣ ಬಳಕೆಯು ಹಾನಿಕಾರಕ ಎನಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸದ್ಯ ಲಭ್ಯವಿರುವ ಪುರಾವೆಗಳ ತೂಕವನ್ನು ನೋಡಿದರೆ ಡೆಲ್ಟಾ ರೂಪಾಂತರಿಯ ಸಮಯದಲ್ಲಿ ಸಾಕಷ್ಟು ಸಾವುಗಳು ವರದಿಯಾದ ಬಳಿಕವೂ ಕೋವಿಡ್​ 19 ಕ್ಲಿನಿಕಲ್​ ನಿರ್ವಹಣೆಯಲ್ಲಿ 2021ರಲ್ಲಿ ಮಾಡಲಾದ ತಪ್ಪುಗಳನ್ನೇ 2022ರಲ್ಲಿಯೂ ಪುನರಾವರ್ತಿಸಲಾಗುತ್ತಿದೆ. ಕೋವಿಡ್​ 19 ಕ್ಲಿನಿಕಲ್​ ನಿರ್ವಹಣೆಗೆ ಸೂಕ್ತವಲ್ಲದ ಔಷಧಿಗಳ ಬಳಕೆಯನ್ನು ನಿಲ್ಲಿಸುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತಿದ್ದೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...