2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಹಾಗೂ ಚೀನಾ ನಡುವೆ ಸಂಘರ್ಷದಲ್ಲಿ ವೇಗವಾಗಿ ಹರಿಯುತ್ತಿದ್ದ ನದಿಯನ್ನು ದಾಟುವ ವೇಳೆಯಲ್ಲಿ ಮುಳುಗಿಹೋದ ಸೈನಿಕರ ಸಂಖ್ಯೆಯು ಚೀನಾವು ವರದಿ ಮಾಡಿದ ಸಂಖ್ಯೆಗಿಂತ ಹೆಚ್ಚಿದೆ ಎಂದು ಆಸ್ಟ್ರೇಲಿಯಾದ ತನಿಖಾ ಪತ್ರಿಕೆಯು ಬುಧವಾರ ಮಾಹಿತಿ ನೀಡಿದೆ.
ಕ್ಲಾಕ್ಸನ್ ವರದಿಯಲ್ಲಿ ಹೆಸರು ಬಹಿರಂಗಪಡಿಸದ ಸಂಶೋಧಕರು ಹಾಗೂ ಚೀನಾದ ಬ್ಲಾಗರ್ಗಳ ಸಂಶೋಧನಾ ವರದಿಯನ್ನು ಉಲ್ಲೇಖಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಇವರೆಲ್ಲ ತಮ್ಮ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಚೀನಾದಲ್ಲಿ ಸಾವು – ನೋವುಗಳು ಹೊಸದೇನಲ್ಲ. ಆದರೂ ಸಾಮಾಜಿಕ ಮಾಧ್ಯಮದ ಸಂಶೋಧಕರ ಗುಂಪು ಒದಗಿಸಿದ ಪುರಾವೆಗಳ ಪ್ರಕಾರ ಚೀನಾದ ಸಾವು ನೋವುಗಳು ಬೀಜಿಂಗ್ ಹೆಸರಿಸಿದ ನಾಲ್ವರು ಸೈನಿಕರನ್ನು ಮೀರಿ ವಿಸ್ತರಿಸಿದೆ ಎಂದು ಕ್ಲಾಕ್ಸನ್ ವರದಿ ಮಾಡಿದೆ.
2020ರಲ್ಲಿ ಎತ್ತರದ ಗಾಲ್ವಾನ್ ಕಣಿಯಲ್ಲಿ ನಡೆದ ಭಾರತ ಹಾಗೂ ಚೀನಾ ನಡುವಿನ ಗಡಿ ಘರ್ಷಣೆಯು ಕಳೆದ ನಾಲ್ಕು ದಶಕಗಳಲ್ಲಿ ನಡೆದ ಎರಡು ದೈತ್ಯ ರಾಷ್ಟ್ರಗಳ ನಡುವಿನ ಮಾರಣಾಂತಿಕ ಮುಖಾಮುಖಿಯಾಗಿದೆ. ವೇಗವಾಗಿ ಹರಿಯುವ ನದಿಯನ್ನು ದಾಟುವಾಗ ಚೀನಾದ ಸಾಕಷ್ಟು ಸೈನಿಕರು ಮುಳುಗಿ ಹೋಗಿದ್ದರು. ಆದರೆ ಈ ಬಗ್ಗೆ ಚೀನಾವು ಒದಗಿಸಿದ ಸಂಖ್ಯೆಗಿಂತ ಹೆಚ್ಚು ಪಟ್ಟು ಜನರು ಇಲ್ಲಿ ಮುಳುಗಿ ಹೋಗಿದ್ದಾರೆ ಎಂದು ವರದಿ ಹೇಳಿದೆ.