ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದಿದ್ದು, ಇದರ ಬದಲಾವಣೆಗೆ ಇಂದಿನಿಂದ ಅವಕಾಶ ಸಿಗುತ್ತಿದೆ. 2000 ಮುಖಬೆಲೆಯ ನೋಟುಗಳ ಮುದ್ರಣವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದ್ದು, ಮಾರುಕಟ್ಟೆಯಲ್ಲಿ ಇದರ ಚಲಾವಣೆಯೂ ಕಡಿಮೆಯಾಗಿತ್ತು.
ಈ ನೋಟುಗಳ ಮುದ್ರಣ ಸ್ಥಗಿತಗೊಂಡಿದ್ದರಿಂದ ಬಹುತೇಕ ಅಂಗಡಿಗಳಲ್ಲಿ ಇದನ್ನು ಸ್ವೀಕರಿಸಲು ಅಂದಿನಿಂದಲೂ ಹಿಂದೇಟು ಹಾಕಲಾಗುತ್ತಿದ್ದು, ಆದರೆ ಪೆಟ್ರೋಲ್ ಬಂಕುಗಳಲ್ಲಿ ಮಾತ್ರ ಸ್ವೀಕರಿಸಲಾಗುತ್ತಿತ್ತು. ಇದೀಗ ಚಲಾವಣೆಯಿಂದ ಈ ನೋಟುಗಳನ್ನು ಹಿಂಪಡೆದ ಬಳಿಕ ಪೆಟ್ರೋಲ್ ಬಂಕುಗಳಲ್ಲಿ ಈ ನೋಟುಗಳ ಚಲಾವಣೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಮಾರ್ಚ್ 2017 ಮೊದಲು ಶೇಕಡ 89ರಷ್ಟು 2,000 ಮುಖಬೆಲೆಯ ನೋಟುಗಳು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿದ್ದು, ಪ್ರಸ್ತುತ ಈ ನೋಟುಗಳ ಚಲಾವಣೆ ಪ್ರಮಾಣ ಶೇಕಡ 10.8ರಷ್ಟು ಮಾತ್ರ ಎಂದು ಹೇಳಲಾಗಿದೆ. ಇವುಗಳನ್ನು ವಿನಿಮಯ ಮಾಡಿಕೊಳ್ಳಲು ಇಂದಿನಿಂದ ಬ್ಯಾಂಕುಗಳಲ್ಲಿ ಅವಕಾಶ ಸಿಗುತ್ತಿದ್ದು, 2000 ಮುಖಬೆಲೆಯ ನೋಟು ಹೊಂದಿದವರು ಸುಲಭವಾಗಿ ಬದಲಾಯಿಸಿಕೊಳ್ಳಬಹುದಾಗಿದೆ.