alex Certify ಜನಸಾಮಾನ್ಯನೊಬ್ಬ 1 ದಿನದ ಮಟ್ಟಿಗೆ ಸಿಎಂ ಆದ ಕಥೆ ಹೊಂದಿರುವ ʼನಾಯಕ್‌‌ʼ ಬಿಡುಗಡೆಯಾಗಿ ಈಗ 20 ವರ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯನೊಬ್ಬ 1 ದಿನದ ಮಟ್ಟಿಗೆ ಸಿಎಂ ಆದ ಕಥೆ ಹೊಂದಿರುವ ʼನಾಯಕ್‌‌ʼ ಬಿಡುಗಡೆಯಾಗಿ ಈಗ 20 ವರ್ಷ

ಎಸ್‌. ಶಂಕರ್‌‌ ನಿರ್ಮಾಣದ ’ನಾಯಕ್’ ಚಿತ್ರ 20 ವರ್ಷಗಳ ಹಿಂದೆ ಇದೇ ದಿನದಂದು ಬೆಳ್ಳಿ ತೆರೆಗೆ ಅಪ್ಪಳಿಸಿದಾಗ ಚಿತ್ರಕಥೆಯ ಉದ್ದ, ಸ್ಟಂಟ್‌ಗಳು ಹಾಗೂ ವಿಶೇಷ ಎಫೆಕ್ಟ್‌ಗಳ ಅತಿಯಾದ ಬಳಕೆ ಬಗ್ಗೆ ಬಹಳ ಟೀಕೆಗಳು ಕೇಳಿಬಂದಿದ್ದವು.

ಚಿತ್ರದ ಖಳ ಪಾತ್ರಧಾರಿ ದೊಡ್ಡದೊಂದು ಹಾವಾಗಿ ಚೆಸ್ ಬೋರ್ಡ್ ಮೇಲೆ ಮುಖ್ಯ ಪಾತ್ರಧಾರಿಗಳನ್ನು ಚೇಸ್ ಮಾಡುವ ದೃಶ್ಯವನ್ನು ಅರಗಿಸಿಕೊಳ್ಳಲು ಚಿತ್ರರಸಿಕರಿಗೆ ಭಾರೀ ಕಿರಿಕಿರಿಯಾಗಿತ್ತು.

ಬಾಕ್ಸ್ ಆಫೀಸ್ ಇಂಡಿಯಾ ಪ್ರಕಾರ, ʼನಾಯಕ್ʼ ಚಿತ್ರದ ಬಜೆಟ್ 21 ಕೋಟಿ ರೂ.ಗಳಿದ್ದರೆ, ಬಾಕ್ಸ್ ಆಫೀಸ್‌ನಲ್ಲಿ ಬರೇ 18.06 ಕೋಟಿ ರೂ.ಗಳನ್ನಷ್ಟೇ ಸಂಗ್ರಹಿಸಲು ಸಫಲವಾಗಿತ್ತು.

ತಮ್ಮ ಸೋಲು ಕಂಡು ಬಿಕ್ಕಿಬಿಕ್ಕಿ ಅತ್ತಿದ್ದ ಅಭಿಮಾನಿ ಭೇಟಿ ಮಾಡಿದ ಮೇರಿ ಕೋಮ್

ತಮಿಳಿನ ’ಮುದಲವನ್‌’ ಚಿತ್ರದ ಮರುನಿರ್ಮಾಣವಾದ ರಾಜಕೀಯ ಥ್ರಿಲ್ಲರ್‌ ಚಿತ್ರ ʼನಾಯಕ್ʼ ಒಮ್ಮೆ ಕಿರುತೆರೆಗೆ ಬಂದು ಪದೇ ಪದೇ ಬಿತ್ತರಗೊಂಡ ಬಳಿಕ ಜನಾಭಿಪ್ರಾಯವಾಗಿ ಬದಲಾಯಿತು. ಟಿವಿ ಕ್ಯಾಮೆರಾಮನ್ ಒಬ್ಬರು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕುರ್ಚಿಯಲ್ಲಿ ಒಂದು ದಿನ ಕಳೆಯುವ ನಂಬಲು ಅಸಾಧ್ಯವಾದ ಹಂದರರ ಕತೆಯ ಈ ಚಿತ್ರದಲ್ಲಿ ಜನಸಾಮಾನ್ಯನೊಬ್ಬ ತನ್ನ ದೈನಂದಿನ ಕಷ್ಟಗಳಿಗೆ ಪವಾಡದಸದೃಶ ಪರಿಹಾರವೊಂದನ್ನು ಅರಸುವ ಮನಸ್ಥಿತಿಯನ್ನು ಕಥಾರೂಪಕ್ಕೆ ತಂದಿದೆ.

ಚಿತ್ರದಲ್ಲಿ ಎವರ್‌ಯಂಗ್ ಅನಿಲ್ ಕಪೂರ್‌ರ ನಟನೆ ಹೈಲೈಟ್ ಆಗಿದ್ದು, ಪೂಜಾ ಬಾತ್ರಾರ ದನಿ ಮ್ಯಾಜಿಕಲ್ ಟಚ್‌ ಕೊಟ್ಟಿದೆ.

ದಂಗೆಯೊಂದರಲ್ಲಿ ಗಾಯಗೊಳ್ಳುವ ಜನಸಾಮಾನ್ಯರ ನೆರವಿಗೆ ಬರುವ ಕ್ಯಾಮೆರಾಮನ್ ಪಾತ್ರಧಾರಿಯಾಗಿ ಅನಿಲ್ ಕಪೂರ್‌ ಪರಕಾಯ ಪ್ರವೇಶ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಯೊಬ್ಬರನ್ನು ಪ್ರಶ್ನಿಸುವುದರಿಂದ ಹಿಡಿದು ಭ್ರಷ್ಟ ಪ್ರಕ್ರಿಯೆಗಳನ್ನು ನಿಮಿಷಗಳಲ್ಲಿ ಧ್ವಂಸ ಮಾಡುವ ಸಿಎಂ ಆಗಿ ಅನಿಲ್ ಕಪೂರ್‌ ಜನಸಾಮಾನ್ಯರು ಮನಸ್ಸಿನಲ್ಲೇ ’ಹಿಂಗ್ಯಾಕೆ ಆಗಬಾರದು?’ ಎಂದು ಹಪಹಪಿಸಿಕೊಳ್ಳುವುದನ್ನು ತೆರೆ ಮೇಲೆ ಮಾಡಿ ತೋರಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಜನಸಾಮಾನ್ಯನೊಬ್ಬನ ಹೋರಾಟದ ಕಥಾ ಹಂದರದ ಚಿತ್ರಗಳು ಬಹಳಷ್ಟು ಬಂದಿದ್ದರೂ ಸಹ ’ನಾಯಕ್’ನಂತೆ ಸದ್ದು ಮಾಡಿದ ಚಿತ್ರಗಳು ಬಹಳ ಅಪರೂಪ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...