2017ರಿಂದಲೂ ಅಕ್ಟೋಬರ್ 11ರಂದು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯಂದು ಪ್ರತಿ ವರ್ಷ ಈ ಸ್ಫರ್ಧೆಯನ್ನು ಬ್ರಿಟಿಷ್ ರಾಯಭಾರ ಕಚೇರಿ ಹಮ್ಮಿಕೊಂಡು ಬರುತ್ತಿದೆ.
ಭಾರತೀಯ ಆಡಳಿತ ಸೇವೆಗಳ ಆಕಾಂಕ್ಷಿಯಾದ ಅದಿತಿ, ರಾಯಭಾರ ಕಚೇರಿಯಿಂದ ಈ ಹುದ್ದೆಗೆ ಆಯ್ಕೆಯಾದ ಐದನೇ ಭಾರತೀಯರಾಗಿದ್ದಾರೆ.
ರಾಜ್ಯದಲ್ಲಿ ಇಂದಿನಿಂದ ಆನ್ ಲೈನ್ ಗ್ಯಾಂಬ್ಲಿಂಗ್ ನಿಷೇಧ
ಭಾರತಕ್ಕೆ ಬ್ರಿಟನ್‌ನ ಅಗ್ರ ರಾಯಭಾರಿಯಾಗಿ ಕೆಲಸ ಮಾಡಿದ ಒಂದು ದಿನದಲ್ಲಿ ಬಹಳಷ್ಟು ದೊಡ್ಡ ವಿಷಯಗಳನ್ನು ಹತ್ತಿರದಿಂದ ಗಮನಿಸಿದ ಅದಿತಿ, ಅಭಿವೃದ್ಧಿ ಸಂಬಂಧ ಭಾರತ-ಬ್ರಿಟನ್ ಎನರ್ಜಿ ಒಪ್ಪಂದದ ಕುರಿತು ಸಚಿವರಾದ ರಾಜ್ ಕುಮಾರ್ ಸಿಂಗ್ ಹಾಗೂ ಕ್ವಾಸಿ ಕ್ವಾರ್ಟೆಂಗ್ ಜೊತೆಗೆ ಹತ್ತಿರದಿಂದ ಸಮಾಲೋಚನೆಗಳನ್ನು ಗಮನಿಸಿದ್ದಾರೆ.
ಇದೇ ವೇಳೆ, ಗ್ಲಾಸ್ಗೌನಲ್ಲಿ ಮುಂದಿನ ತಿಂಗಳು ಆಯೋಜಿಸಲಾದ ಸಿಓಪಿ26 ಹವಾಮಾನ ಬದಲಾವಣೆಯ ವೇಳೆ ಜಾಗತಿಕ ನಾಯಕರು ಬಳಸಲಿರುವ ಐ-ಪೇಸ್-ಜಾಗ್ವಾರ್‌ನ ಶೂನ್ಯ ಮಾಲಿನ್ಯಕಾರಕ ಹೊರಸೂಸುವಿಕೆಯ ವಿದ್ಯುತ್ ಚಾಲಿತ ಎಸ್‌ಯುವಿಯ ಡೆಮೋವನ್ನೂ ಸಹ ಅದಿತಿ ಇದೇ ವೇಳೆ ಕಂಡುಕೊಂಡಿದ್ದಾರೆ.