alex Certify ಇಮ್ರಾನ್​ ಹಶ್ಮಿ ಹಾಗೂ ಸನ್ನಿ ಲಿಯೋನ್​ ಈ ವಿದ್ಯಾರ್ಥಿಯ ಪೋಷಕರಂತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಮ್ರಾನ್​ ಹಶ್ಮಿ ಹಾಗೂ ಸನ್ನಿ ಲಿಯೋನ್​ ಈ ವಿದ್ಯಾರ್ಥಿಯ ಪೋಷಕರಂತೆ..!

ಸಾಮಾನ್ಯವಾಗಿ ಗ್ರಾಮೀಣ ಭಾಗಗಳ ಮತದಾರರ ಪಟ್ಟಿಯಲ್ಲಿ ಬಾಲಿವುಡ್​ ನಟ ನಟಿಯರ ಹೆಸರುಗಳು, ಫೋಟೋಗಳು ತಪ್ಪಾಗಿ ನಮೂದಾಗಿರುವ ಸುದ್ದಿಗಳನ್ನ ನಾವು ನೋಡ್ತಾನೇ ಇರ್ತೇವೆ. ಕಳೆದ ವರ್ಷವಷ್ಟೇ ಸನ್ನಿ ಲಿಯೋನ್​​ ಹೆಸರು ಬಿಹಾರ ಜ್ಯೂನಿಯರ್​ ಇಂಜಿನಿಯರ್​​ ಪರೀಕ್ಷಾ ಮೆರಿಟ್​ ಪಟ್ಟಿಯಲ್ಲಿ ನಮೂದಾಗಿತ್ತು.

ಇದೀಗ ಮತ್ತೊಮ್ಮೆ ಸನ್ನಿ ಲಿಯೋನ್​​ ಇಂತಹದ್ದೇ ಮತ್ತೊಂದು ಕಾರಣಕ್ಕೆ ಬಿಹಾರದಲ್ಲಿ ಸುದ್ದಿಯಾಗಿದ್ದಾರೆ. ಮುಜಾಫ್​ಪುರದ 20 ವರ್ಷದ ವಿದ್ಯಾರ್ಥಿ ತನ್ನ ಬಿಎ ಎರಡನೇ ವರ್ಷದ ಪರೀಕ್ಷೆ ಪ್ರವೇಶ ಪತ್ರದಲ್ಲಿ ನಟರಾದ ಇಮ್ರಾನ್​ ಹಷ್ಮಿ ಹಾಗೂ ಸನ್ನಿ ಲಿಯೋನ್​ರನ್ನ ಪೋಷಕರ ಹೆಸರಿನಲ್ಲಿ ಬರೆದಿದ್ದಾನೆ.
ಭೀಮ್​ರಾವ್​ ಅಂಬೇಡ್ಕರ್​ ಬಿಹಾರ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರವೇಶ ಪತ್ರದ ಫೋಟೋಗಳನ್ನ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ಶಿಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...