ಥೈರಾಯ್ಡ್ ಕ್ಯಾನ್ಸರ್ ತಡೆಗಟ್ಟಬೇಕು ಅಂದರೆ ಸ್ಥೂಲಕಾಯವನ್ನು ಕಡಿಮೆ ಮಾಡಿಕೊಳ್ಳಲೇಬೇಕೆಂದು ಹೊಸ ಅಧ್ಯಯನವೊಂದು ಹೇಳಿದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಕ್ಯಾನ್ಸರ್ನಲ್ಲಿ ಈ ವರದಿಯನ್ನು ಪ್ರಕಟಿಸಲಾಗಿದೆ.
ಯುಎನ್ಎಸ್ಡಬ್ಲು ಸ್ಕೂಲ್ನ ಡಾ. ಮಾರಿಟ್ ಲಾಕ್ಸೊನೆನ್ ನೇತೃತ್ವದಲ್ಲಿ ನಡೆಸಲಾದ ವಿಶ್ವದ ಮೊದಲ ಅಧ್ಯಯನದಲ್ಲಿ ಆಸ್ಟ್ರೇಲಿಯಾವು ಸ್ಥೂಲಕಾಯದಿಂದಲೇ ಥೈರಾಯ್ಡ್ ಕ್ಯಾನ್ಸರ್ ಬರುತ್ತದೆ ಎಂದು ಕಂಡು ಹಿಡಿಯಲಾಗಿದೆ.
ಡೇಟಾ ಸೈನ್ಸ್ನ ಹಿರಿಯ ಉಪನ್ಯಾಸಕ ಡಾ. ಲಾಕ್ಸೋನೆನ್ ಕಳೆದ 2 ದಶಕಗಳಲ್ಲಿ ಆಸ್ಟ್ರೇಲಿಯಾದಲ್ಲಿ ಸ್ಥೂಲಕಾಯ ಇರುವವರ ಸಂಖ್ಯೆಯು ದ್ವಿಗುಣಗೊಂಡಿದೆ. ಆಸ್ಟ್ರೇಲಿಯಾದಲ್ಲಿ 75 ಪ್ರತಿಶತ ಪುರುಷರು ಹಾಗೂ 60 ಪ್ರತಿಶತದಷ್ಟು ಮಹಿಳೆಯರು ಅಧಿಕ ತೂಕ ಅಥವಾ ಸ್ಥೂಲಕಾಯದ ಸಮಸ್ಯೆ ಹೊಂದಿದ್ದಾರೆ ಎಂದು ಹೇಳಿದರು.
ಈ ಸಂಶೋಧನೆಯು ಮುಂದಿನ 10 ವರ್ಷಗಳಲ್ಲಿ ಸುಮಾರು 10 ಸಾವಿರ ಥೈರಾಯ್ಡ್ ಕ್ಯಾನ್ಸರ್ ರೋಗಿಗಳು ಇರಬಹುದು ಎಂದು ಅಂದಾಜಿಸಿದೆ ಎಂದು ಡಾ. ಲಾಕ್ಸೋನೆನ್ ಹೇಳಿದ್ದಾರೆ.
ಇಂಟರ್ನ್ಯಾಷನಲ್ ಏಜನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ನಡೆಸಿದ ಅಧ್ಯಯನದಲ್ಲಿ ಅತಿಯಾದ ಬೊಜ್ಜು ಕ್ಯಾನ್ಸರ್ಗೆ ಮುಖ್ಯ ಕಾರಣವಾಗಿದೆ ಎಂದು ಹೇಳಿದೆ.
ಕ್ಯಾನ್ಸರ್ ಸಂಶೋಧನೆಯ ಮುಖ್ಯ ಪ್ರಾಧಿಕಾರ, ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್, ದೇಹದ ಬೊಜ್ಜು ಥೈರಾಯ್ಡ್ ಕ್ಯಾನ್ಸರ್ಗೆ ಕಾರಣವಾಗುವ ಅಪಾಯಕಾರಿ ಅಂಶವಾಗಿದೆ ಎಂದು ತೀರ್ಮಾನಿಸಿದೆ.