alex Certify 20 ಅಡಿ ಆಳದ ಚರಂಡಿಗೆ ಬಿದ್ದ ಪುಟ್ಟ ಮಗನನ್ನು ರಕ್ಷಿಸಲು ಮ್ಯಾನ್‌ ಹೋಲ್ ಗೆ ಜಿಗಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ಅಡಿ ಆಳದ ಚರಂಡಿಗೆ ಬಿದ್ದ ಪುಟ್ಟ ಮಗನನ್ನು ರಕ್ಷಿಸಲು ಮ್ಯಾನ್‌ ಹೋಲ್ ಗೆ ಜಿಗಿದ ಮಹಿಳೆ

ಮಹಿಳೆಯೊಬ್ಬರು ಮ್ಯಾನ್‌ಹೋಲ್ ಒಳಗೆ ಬಿದ್ದ ತನ್ನ 18 ತಿಂಗಳ ಮಗನನ್ನು ರಕ್ಷಿಸಲು ಚರಂಡಿಗೆ ಹಾರಿರುವ ಘಟನೆ ಯುಕೆನಲ್ಲಿ ನಡೆದಿದೆ. ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ವೈರಲ್ ಆಗಿದೆ.

23 ವರ್ಷದ ಆಮಿ ಬ್ಲೈತ್ ಅವರು ಕೆಂಟ್‌ನ ಆಶ್‌ಫೋರ್ಡ್‌ನಲ್ಲಿ ತನ್ನ ಮಗ ಥಿಯೋ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಈ ಭಯಾನಕ ಘಟನೆ ನಡೆದಿದೆ. ಮಗು ಡ್ರೈನೇಜ್ ಬಳಿ ಅದೇನೆಂದು ಕುತೂಹಲದಿಂದ ನೋಡಲು ಹೋಗಿದೆ. ಈ ವೇಳೆ ಡ್ರೈನೇಜ್ ಮುಚ್ಚಳ ಒಮ್ಮೆಲೇ ಕುಸಿದ ಪರಿಣಾಮ ಬಾಲಕ ಚರಂಡಿಗೆ ಬಿದ್ದಿದ್ದಾನೆ.

ಮಗು ಚರಂಡಿಗೆ ಬೀಳುತ್ತಿದ್ದಂತೆ ಆತನನ್ನು ಹಿಡಿಯಲು ಪ್ರಯತ್ನಿಸಿದ್ರೂ ತಾಯಿಗೆ ಸಾಧ್ಯವಾಗಲಿಲ್ಲ. ಕೂಡಲೇ ಚರಂಡಿಗೆ ಜಿಗಿದ ಬ್ಲೈತ್ ತನ್ನ ಮಗ ಥಿಯೋನನ್ನು ರಕ್ಷಿಸಿದ್ದಾರೆ. ಈ ಭಯಾನಕ ಅನುಭವವನ್ನು ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...