alex Certify 2 ವರ್ಷ ವಯಸ್ಸಿಗೆ 45 ಕೆಜಿ ತೂಕ ಹೊಂದಿದ್ದ ಕಂದಮ್ಮಗೆ ಯಶಸ್ವಿ ಶಸ್ತ್ರ ಚಿಕಿತ್ಸೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ವರ್ಷ ವಯಸ್ಸಿಗೆ 45 ಕೆಜಿ ತೂಕ ಹೊಂದಿದ್ದ ಕಂದಮ್ಮಗೆ ಯಶಸ್ವಿ ಶಸ್ತ್ರ ಚಿಕಿತ್ಸೆ..!

ಬರೋಬ್ಬರಿ 45 ಕೆಜಿ ತೂಕ ಹೊಂದುವ ಮೂಲಕ ವ್ಹೀಲ್​ ಚೇರ್​ನಲ್ಲಿದ್ದ 2 ವರ್ಷ ಪ್ರಾಯದ ಹೆಣ್ಣು ಮಗುವಿನ ಹೊಟ್ಟೆಯ ಭಾಗದಲ್ಲಿನ 1 ಭಾಗವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗಿದೆ. ದೆಹಲಿಯ ಖಾಸಗಿ ಆಸ್ಪತ್ರೆಯು ಈ ಶಸ್ತ್ರ ಚಿಕಿತ್ಸೆ ನಡೆದಿದ್ದು ಈಕೆ ತಮ್ಮ ಆಸ್ಪತ್ರೆಯ ಅತ್ಯಂತ ಕಿರಿಯ ಬಾರಿಯಾಟ್ರಿಕ್​ ಶಸ್ತ್ರಚಿಕಿತ್ಸೆಗೊಳಗಾದ ರೋಗಿ ಎಂದು ಹೇಳಿದೆ.

ಪತ್ಪರ್​ಗಂಜ್​ನ ಮ್ಯಾಕ್ಸ್ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿತ್ತು.

ಮಕ್ಕಳಿಗೆ ಬ್ಯಾರಿಯಾಟ್ರಿಕ್​​​ ಶಸ್ತ್ರ ಚಿಕಿತ್ಸೆ ನಡೆಸೋದು ತುಂಬಾನೇ ವಿರಳ. ಹೀಗಾಗಿ ಈ ಬಾಲಕಿಯು ಈ ದಶಕದ ಅತ್ಯಂತ ಕಿರಿಯ ಬ್ಯಾರಿಯಾಟ್ರಿಕ್​​​ ಸರ್ಜರಿ ರೋಗಿ ಎಂದು ಕರೆಯಬಹುದು ಎಂದು ಆಸ್ಪತ್ರೆ ಹೇಳಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ನಟ ದುಲ್ಕರ್ ಸಲ್ಮಾನ್

ಈ ಬ್ಯಾರಿಯಾಟ್ರಿಕ್​ ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗಳಿಗೆ ಪೂರ್ಣತೆಯ ಭಾವನೆ ಉಂಟಾಗುತ್ತದೆ. ಇದರಿಂದ ಅವರಿಗೆ ಹಸಿವು ಕಡಿಮೆ ಆಗುತ್ತದೆ. ಇದರಿಂದ ತೂಕ ಇಳಿಕೆ ಉಂಟಾಗುತ್ತದೆ. ಮಾತ್ರವಲ್ಲದೇ ಆರೋಗ್ಯ ಕೂಡ ಸುಧಾರಿಸುತ್ತೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಡಾ. ಮನ್​ಪ್ರೀತ್​ ಸೇಠಿ, ಜನನದ ವೇಳೆ ಈ ಮಗುವು ಸಾಮಾನ್ಯರಂತೆ 2.5 ಕೆಜಿ ತೂಕವನ್ನು ಹೊಂದಿತ್ತು. ಆದರೆ ಆರು ತಿಂಗಳಲ್ಲಿ ಈ ಹೆಣ್ಣು ಮಗುವಿನ ತೂಕ 14 ಕೆಜಿಯಾಗಿತ್ತು. ಈಕೆಯ ಓರ್ವ ಹಿರಿಯ ಸಹೋದರ ಕೂಡ ಇದ್ದು ಆತ ಸಾಮಾನ್ಯರಂತೆ ಇದ್ದಾನೆ. ಆಕೆಯ ತೂಕ ಎಷ್ಟರ ಮಟ್ಟಿಗೆ ಏರಿಕೆಯಾಯ್ತು ಅಂದ್ರೆ 2 ವರ್ಷ ಆಗುವಷ್ಟರ ಹೊತ್ತಿಗೆ ಆಕೆಯ ತೂಕ 45 ಕೆಜಿ ಆಯ್ತು ಎಂದು ಹೇಳಿದ್ರು. ಈ ವಯಸ್ಸಿನಲ್ಲಿ ಸಾಮಾನ್ಯವಾಗಿ ಮಕ್ಕಳು 12 ರಿಂದ 15 ಕೆಜಿ ತೂಕ ಹೊಂದಿರ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...