alex Certify ಸಲಿಂಗಕಾಮಿಗಳೆಂದು ಆರೋಪಿಸಿ ಇಬ್ಬರು ಹುಡುಗಿಯರ ಮೇಲೆ ಅಮಾನುಷ ಹಲ್ಲೆ; ಖಾಸಗಿ ಭಾಗಕ್ಕೆ ರಾಡ್‌ ಹಾಕಿ ಚಿತ್ರಹಿಂಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲಿಂಗಕಾಮಿಗಳೆಂದು ಆರೋಪಿಸಿ ಇಬ್ಬರು ಹುಡುಗಿಯರ ಮೇಲೆ ಅಮಾನುಷ ಹಲ್ಲೆ; ಖಾಸಗಿ ಭಾಗಕ್ಕೆ ರಾಡ್‌ ಹಾಕಿ ಚಿತ್ರಹಿಂಸೆ

ಸಲಿಂಗಕಾಮಿಗಳೆಂದು ಆರೋಪಿಸಿ ಇಬ್ಬರು ಹುಡುಗಿಯರ ಮೇಲೆ ಪುರುಷರ ಗುಂಪು ಹಲ್ಲೆ ಮಾಡಿ ಅವರ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ಹಾಕಿ ಕಿರುಕುಳ ನೀಡಿದ ಕ್ರೂರ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಔತುವಾ ಗ್ರಾಮದಲ್ಲಿ ಅಕ್ಟೋಬರ್ 25 ರಂದು ರಾತ್ರಿ ಕೋಣೆಯೊಂದರಲ್ಲಿ ಇಬ್ಬರು ಹುಡುಗಿಯರು ಮಲಗಿದ್ದಾಗ ಪುರುಷರ ಗುಂಪು ಮನೆಗೆ ನುಗ್ಗಿದೆ. ಸಂತ್ರಸ್ತರ ಸಂಬಂಧಿಕರು ಸೇರಿದಂತೆ ಮೂವರು ಪುರುಷರು ಹುಡುಗಿಯರು ಒಂದೇ ಹಾಸಿಗೆಯನ್ನು ಏಕೆ ಹಂಚಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.

ಮೂವರೂ ನಂತರ ಅವರನ್ನು ಕ್ರೂರವಾಗಿ ಹೊಡೆದಿದ್ದು, ಅವರು ಸಲಿಂಗಕಾಮಿಗಳೆಂಬ ಕಾರಣಕ್ಕಾಗಿ ಅವರ ಖಾಸಗಿ ಅಂಗವನ್ನು ಬಿಸಿ ರಾಡ್‌ಗಳಿಂದ ಸುಟ್ಟಿದ್ದಾರೆ . ಮೂವರು ಯುವಕರು ಅತ್ಯಾಚಾರ ಮಾಡಲು ಪ್ರಯತ್ನಿಸಿದಾಗ ಸಂತ್ಸಸ್ತೆಯರು ಓಡಿಹೋಗಿ ಹೊಲದಲ್ಲಿ ಆಶ್ರಯ ಪಡೆದರು ಎಂದು ಓರ್ವ ಸಂತ್ರಸ್ತೆಯ ಅಜ್ಜಿ ತಿಳಿಸಿದರು. ವರದಿಗಳ ಪ್ರಕಾರ ಭಯದ ಕಾರಣ ಘಟನೆಯ ಮೂರು ದಿನಗಳ ನಂತರ ಪ್ರಕರಣ ದಾಖಲಿಸಲಾಗಿದೆ.

ಮೂವರು ಆರೋಪಿಗಳಲ್ಲಿ ಒಬ್ಬನಾದ ಸಾಹೇಬುಲ್ ಶೇಖ್ ನನ್ನು ಮುರ್ಷಿದಾಬಾದ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೋಮವಾರ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಇನ್ನಿಬ್ಬರು ಆರೋಪಿಗಳನ್ನು ಕದಂ ಮತ್ತು ಸಾಹೇಬ್ ಎಂದು ಗುರುತಿಸಲಾಗಿದ್ದು ಸದ್ಯ ತಲೆಮರೆಸಿಕೊಂಡಿದ್ದಾರೆ.

ವರದಿಗಳ ಪ್ರಕಾರ,ಇಬ್ಬರು ಹುಡುಗಿಯರ ನಡುವಿನ ಸಲಿಂಗಕಾಮ ಸಂಬಂಧದ ಬಗ್ಗೆ ಗ್ರಾಮಸ್ಥರಿಗೆ ತಿಳಿದಿತ್ತು. ಸಂತ್ರಸ್ತರಲ್ಲಿ ಓರ್ವ ಹುಡುಗಿ ತಮ್ಮ ಸಂಬಂಧವನ್ನು ದೃಢಪಡಿಸಿದ್ದು ಆರೋಪಿಗಳು ತಮ್ಮ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದರು ಎಂದು ಹೇಳಿದ್ದಾರೆ. ನಾವು ಸಂಬಂಧದಲ್ಲಿದ್ದೇವೆ, ಯಾರೂ ನಮ್ಮನ್ನು ತಡೆಯಲಿಲ್ಲ. ನಮಗೆ ಎಚ್ಚರಿಕೆ ನೀಡಿದ್ದರೆ ನಾವು ಆ ಸಂಬಂಧವನ್ನು ಅನುಸರಿಸುತ್ತಿರಲಿಲ್ಲ. ಆದರೆ ಅವರಲ್ಲಿ ಮೂವರು ನಮಗೆ ಕಿರುಕುಳ ನೀಡಿದರು, ಅಹಿತಕರವಾಗಿ ನಮ್ಮನ್ನು ಸ್ಪರ್ಶಿಸಿದರು ಮತ್ತು ನಮ್ಮ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದರು ಎಂದು ಹೇಳಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಸಲಿಂಗಕಾಮ ಸಂಬಂಧಗಳನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಹೆಣ್ಣುಮಕ್ಕಳು ಲೆಸ್ಬಿಯನ್ ಎಂದು ಬ್ರಾಂಡ್ ಪಡೆದ ನಂತರ ಶೋಷಣೆಗೆ ಸುಲಭವಾಗಿ ಬಲಿಯಾಗುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ. ಇಬ್ಬರು ಮುಗ್ಧ ಹುಡುಗಿಯರ ಮೇಲೆ ಅತ್ಯಾಚಾರವೆಸಗುವುದು ನಿಜವಾದ ಉದ್ದೇಶವಾಗಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...