alex Certify ಡೆಲ್ಟಾ ರೂಪಾಂತರಿಗಳಿಂದ ಉಂಟಾಗುವ ಸಾವು ತಡೆಗಟ್ಟುವಲ್ಲಿ ‘ಲಸಿಕೆ’ 95 % ಪರಿಣಾಮಕಾರಿ: ಐಸಿಎಂಆರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆಲ್ಟಾ ರೂಪಾಂತರಿಗಳಿಂದ ಉಂಟಾಗುವ ಸಾವು ತಡೆಗಟ್ಟುವಲ್ಲಿ ‘ಲಸಿಕೆ’ 95 % ಪರಿಣಾಮಕಾರಿ: ಐಸಿಎಂಆರ್​

ಕೋವಿಡ್​ 19 ಲಸಿಕೆಗಳಾದ ಕೋವಿಶೀಲ್ಡ್​ ಹಾಗೂ ಕೊವ್ಯಾಕ್ಸಿನ್​​ಗಳು ಕೊರೊನಾ ಸಾವಿನ ಪ್ರಮಾಣವನ್ನ ತಡೆಗಟ್ಟುವಲ್ಲಿ 95 ಪ್ರತಿಶತ ಯಶಸ್ವಿಯಾಗಿದೆ ಎಂದು ಐಸಿಎಂಆರ್​​ ತನ್ನ ಅಧ್ಯಯನದ ಮೂಲಕ ಹೇಳಿದೆ. ಕೊರೊನಾ ಎರಡನೆ ಅಲೆಯು ಉತ್ತುಂಗದಲ್ಲಿ ಇರುವಾಗ ಅಂದರೆ ಡೆಲ್ಟಾ ರೂಪಾಂತರಿ ವೈರಸ್​​ ದೇಶದಲ್ಲಿದ್ದ ಸಂದರ್ಭದಲ್ಲಿ ಈ ಅಧ್ಯಯನವನ್ನ ನಡೆಸಲಾಗಿತ್ತು ಎಂದು ನೀತಿ ಆಯೋಗದ ಸದಸ್ಯ ವಿ ಕೆ ಪಾಲ್​ ಹೇಳಿದ್ದಾರೆ.

ತಮಿಳುನಾಡಿನ 1,17,525 ಮಂದಿ ಪೊಲೀಸ್​ ಅಧಿಕಾರಿಗಳ ಮೇಲೆ ಈ ಅಧ್ಯಯನ ನಡೆಸಲಾಗಿತ್ತು. ಇದರಲ್ಲಿ 17,059 ಮಂದಿ ಪೊಲೀಸರು ಯಾವುದೇ ಲಸಿಕೆಯನ್ನ ಸ್ವೀಕರಿಸಿರಲಿಲ್ಲ. 32,792 ಮಂದಿ ಪೊಲೀಸರು ಮೊದಲ ಡೋಸ್​ ಹಾಗೂ 67,673 ಮಂದಿ ಕೊರೊನಾ 2ನೇ ಡೋಸ್​ಗಳನ್ನ ಸ್ವೀಕರಿಸಿದ್ದರು. ಕೊರೊನಾ ಲಸಿಕೆ ಪಡೆಯದವರಲ್ಲಿ 20 ಮಂದಿ, ಮೊದಲ ಡೋಸ್ ಪಡೆದವರಲ್ಲಿ 7 ಮಂದಿ ಹಾಗೂ ಎರಡೂ ಡೋಸ್​ಗಳನ್ನ ಸ್ವೀಕರಿಸಿದವರಲ್ಲಿ ಕೇವಲ 4 ಮಂದಿ ಮಾತ್ರ ಸೋಂಕಿಗೆ ಬಲಿಯಾಗಿದ್ದಾರೆ.

ಈ ಎಲ್ಲಾ ದತ್ತಾಂಶಗಳನ್ನ ಅವಲೋಕಿಸಿ ನೋಡಿದಾಗ ಮೊದಲ ಡೋಸ್​ ಲಸಿಕೆಯು ಕೊರೊನಾ ಸಾವನ್ನ ತಡೆಯುವಲ್ಲಿ 82 ಪ್ರತಿಶತದಷ್ಟು ಯಶಸ್ವಿಯಾದರೆ ಎರಡೂ ಡೋಸ್​ ಲಸಿಕೆಯು 95 ಪ್ರತಿಶತದಷ್ಟು ಕೊರೊನಾ ಸಾವನ್ನ ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ. ದೇಶದಲ್ಲಿ ಕೊರೊನಾ 2ನೆ ಅಲೆ ಮಿತಿಮೀರಿದ್ದ ಸಂದರ್ಭದಲ್ಲಿ ಅಂದರೆ ಡೆಲ್ಟಾ ರೂಪಾಂತರಿಗಳು ವ್ಯಾಪಿಸುತ್ತಿದ್ದಾಗಲೇ ಈ ಅಧ್ಯಯನವನ್ನ ನಡೆಸಲಾಗಿತ್ತು ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...