alex Certify ಕೇಂದ್ರದಿಂದ ಗುಡ್ ನ್ಯೂಸ್: 2 ಲಕ್ಷ ಅಂಗನವಾಡಿ ಮೇಲ್ದರ್ಜೆಗೆ: ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರದಿಂದ ಗುಡ್ ನ್ಯೂಸ್: 2 ಲಕ್ಷ ಅಂಗನವಾಡಿ ಮೇಲ್ದರ್ಜೆಗೆ: ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ

ನವದೆಹಲಿ: ಮಿಷನ್ ಪೋಷಣ್ 2.0 ಅಡಿಯಲ್ಲಿ 2 ಲಕ್ಷ ಅಂಗನವಾಡಿ ಕೇಂದ್ರಗಳನ್ನು ಸಕ್ಷಮ್ ಅಂಗನವಾಡಿಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಪೌಷ್ಠಿಕಾಂಶ ಮತ್ತು ಆರಂಭಿಕ ಮಕ್ಕಳ ಆರೈಕೆ ಮತ್ತು ಶಿಕ್ಷಣ ಸೇವೆಗಳ ಸುಧಾರಿತ ವಿತರಣೆಗಾಗಿ ಮಿಷನ್ ಪೋಷಣ್ 2.0 ಅಡಿಯಲ್ಲಿ 2 ಲಕ್ಷ ಅಂಗನವಾಡಿ ಕೇಂದ್ರಗಳನ್ನು ಸಕ್ಷಮ್ ಅಂಗನವಾಡಿಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಮಾಹಿತಿ ನೀಡಿದರು.

ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು, ಇದಕ್ಕಾಗಿ 2025-26 ರವರೆಗೆ ವರ್ಷಕ್ಕೆ 40 ಸಾವಿರ ರೂ. ಪೋಷಣ್ ಅಭಿಯಾನದಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸುಮಾರು 11 ಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ನೀಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಮಕ್ಕಳ ಮಾಸಿಕ ಬೆಳವಣಿಗೆಯ ಮಾಪನ ಮತ್ತು ಉದ್ದೇಶಿತ ಮನೆ ಭೇಟಿಗಾಗಿ 500 ರೂಪಾಯಿಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...