alex Certify BREAKING: ಬ್ರಹ್ಮಪುತ್ರ ನದಿಯಲ್ಲಿ 100ಕ್ಕೂ ಅಧಿಕ ಪ್ರಯಾಣಿಕರಿದ್ದ ದೋಣಿಗಳು ಪರಸ್ಪರ ಡಿಕ್ಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಬ್ರಹ್ಮಪುತ್ರ ನದಿಯಲ್ಲಿ 100ಕ್ಕೂ ಅಧಿಕ ಪ್ರಯಾಣಿಕರಿದ್ದ ದೋಣಿಗಳು ಪರಸ್ಪರ ಡಿಕ್ಕಿ

ಆಸ್ಸಾಂನ ಜೋರ್ಹತ್​ ಬ್ರಹ್ಮಪುತ್ರ ನದಿಯಲ್ಲಿ 2 ಪ್ರಯಾಣಿಕರ ದೋಣಿಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ದೋಣಿಯಲ್ಲಿದ್ದ ಅನೇಕರು ನಾಪತ್ತೆಯಾಗಿದ್ದಾರೆ.

ಗುವಾಹಟಿಯಿಂದ 350 ಕಿಲೋಮೀಟರ್​ ದೂರದಲ್ಲಿರುವ ಜೋರ್ಹತ್​​ನ ನಿಮತಿ ಘಾಟ್​ನಲ್ಲಿ ಈ ಘಟನೆ ನಡೆದಿದೆ.

ಬೋಟ್​ಗಳಲ್ಲಿ ಒಟ್ಟು 100 ಮಂದಿ ಪ್ರಯಾಣಿಕರು ಇದ್ದರು ಎಂದು ಅಂದಾಜಿಸಲಾಗಿದೆ. ಒಂದು ದೋಣಿಯು ಮಜುಲಿಯಿಂದ ನಿಮತಿ ಘಾಟ್​​ ಕಡೆಗೆ ಬರುತ್ತಿದ್ದರೆ ಇನ್ನೊಂದು ದೋಣಿಯು ವಿರುದ್ಧ ದಿಕ್ಕಿನಲ್ಲಿ ಹೊರಟಿತ್ತು ಎನ್ನಲಾಗಿದೆ.

ದೋಣಿಯಲ್ಲಿದ್ದ ಅನೇಕರು ಕಣ್ಮರೆಯಾಗಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...