alex Certify 9 ತಿಂಗಳ ಮಗುವಿಗೆ ಮನಬಂದಂತೆ ಥಳಿಸಿದ ತಾಯಿ; ಬೆಚ್ಚಿಬೀಳಿಸುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

9 ತಿಂಗಳ ಮಗುವಿಗೆ ಮನಬಂದಂತೆ ಥಳಿಸಿದ ತಾಯಿ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರಬಹುದು, ಆದ್ರೆ ಕೆಟ್ಟ ತಾಯಿ ಇರೋದಿಲ್ಲ ಅನ್ನೋ ಮಾತಿದೆ. ಆದ್ರೆ ಇಲ್ಲೊಬ್ಳು ತಾಯಿ, ತನ್ನದೇ ಮಗುವನ್ನು ಚಿತ್ರಹಿಂಸೆಗೆ ಗುರಿಪಡಿಸಿದ್ದಾಳೆ. ಒಂಭತ್ತು ತಿಂಗಳ ಪುಟ್ಟ ಕಂದಮ್ಮನಿಗೆ ತಾಯಿ ಮನಬಂದಂತೆ ಥಳಿಸ್ತಾ ಇರೋ ವಿಡಿಯೋ ವೈರಲ್‌ ಆಗಿದೆ.

ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ನಡೆದಿರೋ ಪೈಶಾಚಿಕ ಕೃತ್ಯ ಇದು ಅಂತಾ ಹೇಳಲಾಗ್ತಿದೆ. ಈ ವಿಡಿಯೋ ನೋಡಿದ್ರೆ ಎಂಥವರ ರಕ್ತವೂ ಕುದಿಯೋದು ಸಹಜ. ಶಿಶುವನ್ನು ಹಿಂಸಿಸಿದ ಮಹಿಳೆಗೆ ತಕ್ಕ ಶಿಕ್ಷೆಯಾಗಬೇಕೆಂಬ ಒತ್ತಾಯವೂ ಕೇಳಿಬಂದಿತ್ತು.

ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಬೆಡ್‌ ಮೇಲೆ ಕುಳಿತು ಯಾರೊಂದಿಗೋ ಜಗಳ ಮಾಡ್ತಿದ್ದಾಳೆ. ಈ ವೇಳೆ ಪುಟ್ಟ ಮಗು ಒಂದೇ ಸಮನೆ ಅಳಲಾರಂಭಿಸಿದೆ. ಮಗು ಸುಮ್ಮನಾಗದೇ ಇದ್ದಾಗ ಸಿಟ್ಟಿಗೆದ್ದ ಮಹಿಳೆ, ಮಗುವಿಗೆ ಹೊಡೆದಿದ್ದಾಳೆ. ಬಲವಾಗಿ ಗುದ್ದಿ, ಹಾಸಿಗೆ ಮೇಲೆ ಎಸೆದಿದ್ದಾಳೆ.

ಈ ವಿಡಿಯೋದ ಬೆನ್ನು ಹತ್ತಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಮಹಿಳೆ ಸಾಂಬಾ ಜಿಲ್ಲೆಯವಳು ಅನ್ನೋದು ಪತ್ತೆಯಾಗಿದೆ. ಆಕೆಯ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ವಿಚಾರಣೆ ನಡೆಸ್ತಿದ್ದಾರೆ.‌ ಅಂದ ಹಾಗೆ ಈ ವಿಡಿಯೋ ಒಂದು ತಿಂಗಳ ಹಿಂದಿನದ್ದು ಎನ್ನಲಾಗಿದ್ದು, ಈಗ ವೈರಲ್‌ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...