ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರಬಹುದು, ಆದ್ರೆ ಕೆಟ್ಟ ತಾಯಿ ಇರೋದಿಲ್ಲ ಅನ್ನೋ ಮಾತಿದೆ. ಆದ್ರೆ ಇಲ್ಲೊಬ್ಳು ತಾಯಿ, ತನ್ನದೇ ಮಗುವನ್ನು ಚಿತ್ರಹಿಂಸೆಗೆ ಗುರಿಪಡಿಸಿದ್ದಾಳೆ. ಒಂಭತ್ತು ತಿಂಗಳ ಪುಟ್ಟ ಕಂದಮ್ಮನಿಗೆ ತಾಯಿ ಮನಬಂದಂತೆ ಥಳಿಸ್ತಾ ಇರೋ ವಿಡಿಯೋ ವೈರಲ್ ಆಗಿದೆ.
ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ನಡೆದಿರೋ ಪೈಶಾಚಿಕ ಕೃತ್ಯ ಇದು ಅಂತಾ ಹೇಳಲಾಗ್ತಿದೆ. ಈ ವಿಡಿಯೋ ನೋಡಿದ್ರೆ ಎಂಥವರ ರಕ್ತವೂ ಕುದಿಯೋದು ಸಹಜ. ಶಿಶುವನ್ನು ಹಿಂಸಿಸಿದ ಮಹಿಳೆಗೆ ತಕ್ಕ ಶಿಕ್ಷೆಯಾಗಬೇಕೆಂಬ ಒತ್ತಾಯವೂ ಕೇಳಿಬಂದಿತ್ತು.
ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಬೆಡ್ ಮೇಲೆ ಕುಳಿತು ಯಾರೊಂದಿಗೋ ಜಗಳ ಮಾಡ್ತಿದ್ದಾಳೆ. ಈ ವೇಳೆ ಪುಟ್ಟ ಮಗು ಒಂದೇ ಸಮನೆ ಅಳಲಾರಂಭಿಸಿದೆ. ಮಗು ಸುಮ್ಮನಾಗದೇ ಇದ್ದಾಗ ಸಿಟ್ಟಿಗೆದ್ದ ಮಹಿಳೆ, ಮಗುವಿಗೆ ಹೊಡೆದಿದ್ದಾಳೆ. ಬಲವಾಗಿ ಗುದ್ದಿ, ಹಾಸಿಗೆ ಮೇಲೆ ಎಸೆದಿದ್ದಾಳೆ.
ಈ ವಿಡಿಯೋದ ಬೆನ್ನು ಹತ್ತಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಮಹಿಳೆ ಸಾಂಬಾ ಜಿಲ್ಲೆಯವಳು ಅನ್ನೋದು ಪತ್ತೆಯಾಗಿದೆ. ಆಕೆಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ವಿಚಾರಣೆ ನಡೆಸ್ತಿದ್ದಾರೆ. ಅಂದ ಹಾಗೆ ಈ ವಿಡಿಯೋ ಒಂದು ತಿಂಗಳ ಹಿಂದಿನದ್ದು ಎನ್ನಲಾಗಿದ್ದು, ಈಗ ವೈರಲ್ ಆಗಿದೆ.
https://twitter.com/satwantrissam/status/1513544274020745220?ref_src=twsrc%5Etfw%7Ctwcamp%5Etweetembed%7Ctwterm%5E1513544274020745220%7Ctwgr%5E%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Foneindia-epaper-oneindia%2Fmotherbeatschokes9montholdbabyarrestedafterspinechillingvideogoesviral-newsid-n376531448%3Fs%3Dauu%3D0x55cb624adc0d7d7css%3Dwsp