alex Certify ಬಾಲಾಪರಾಧಿಯಾಗಿದ್ದರೂ 19 ವರ್ಷ ಜೈಲಿನಲ್ಲಿ; ಬಿಡುಗಡೆಗೆ ಕೋರ್ಟ್ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಾಪರಾಧಿಯಾಗಿದ್ದರೂ 19 ವರ್ಷ ಜೈಲಿನಲ್ಲಿ; ಬಿಡುಗಡೆಗೆ ಕೋರ್ಟ್ ಆದೇಶ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆಗೈದ ಆರೋಪಿಯನ್ನು ಬಾಲಾಪರಾಧಿ ಎಂದು ಘೋಷಿಸಲಾಗಿದ್ದರೂ ಸುಮಾರು 19 ವರ್ಷಗಳಿಂದ ಜೈಲಿನಲ್ಲಿದ್ದ ವ್ಯಕ್ತಿಯನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ವಿ ರಾಮಸುಬ್ರಮಣಿಯನ್​ ಅವರ ಪೀಠವು ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2000ರ ನಿಬಂಧನೆಗಳ ಪ್ರಕಾರ ಬಾಲಾಪರಾಧಿಯನ್ನು ಮೂರು ವರ್ಷಗಳ ನಂತರ ಬಂಧನದಲ್ಲಿಡಲು ಸಾಧ್ಯವಿಲ್ಲ ಎಂದು ಹೇಳಿದೆ.

ರಾಜ್ಯದ ಪರವಾಗಿ ಹಾಜರಾದ ವಕೀಲರು ಪ್ರಕರಣವನ್ನು ಪರಿಶೀಲಿಸಲು ಸಮಯವನ್ನು ಬಯಸಿದ್ದರು. ಆದರೆ, ಅರ್ಜಿದಾರನನ್ನು ಬಾಲಾಪರಾಧಿ ಎಂದು ಘೋಷಿಸುವ ಬಾಲ ನ್ಯಾಯ ಮಂಡಳಿಯ ಆದೇಶವು 2014ರಲ್ಲಿ ಜಾರಿಗೊಂಡಿರುವುದರಿಂದ, ಅರ್ಜಿದಾರನನ್ನು ಕಸ್ಟಡಿಯಲ್ಲಿ ಇನ್ನು ಮುಂದೆ ಬಂಧಿಸುವ ಪ್ರಶ್ನೆಯೇ ಇಲ್ಲ ಎಂದು ಪೀಠ ಹೇಳಿತು.

ಅರ್ಜಿದಾರನಿಗೆ ವೈಯಕ್ತಿಕ ಬಾಂಡ್​ ಮೇಲೆ ತಕ್ಷಣವೇ ಮಧ್ಯಂತರ ಜಾಮೀನು ನೀಡಬೇಕು ಮತ್ತು ವಾರಕ್ಕೊಮ್ಮೆ ಸ್ಥಳೀಯ ಪೊಲೀಸ್​ ಠಾಣೆಗೆ ಹಾಜರಾಗುವಂತೆ ಸುಪ್ರೀಂಕೋರ್ಟ್​ ಆದೇಶಿಸಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 302 (ಕೊಲೆ) ಮತ್ತು 376 (ಅತ್ಯಾಚಾರ) ಅಡಿಯಲ್ಲಿ ಅಪರಾಧಿಯೆಂದು ಪರಿಗಣಿಸಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್​ಗೆ ತಿಳಿಸಲಾಯಿತಲ್ಲದೇ, ಅಪರಾಧ ಮತ್ತು ಶಿಕ್ಷೆಯನ್ನು ಉನ್ನತ ನ್ಯಾಯಾಲಯವು ಎತ್ತಿಹಿಡಿದಿದೆ ಎಂದು ಪೀಠಕ್ಕೆ ತಿಳಿಸಲಾಯಿತು.

ನಂತರ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಕ್ಷಮಾದಾನ ಅರ್ಜಿಯಲ್ಲಿ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿತ್ತು. ರಾಷ್ಟ್ರಪತಿಗೆ ಸಲ್ಲಿಸಿದ ಅರ್ಜಿಯಲ್ಲಿಯೂ ಸಹ ಅರ್ಜಿದಾರರು ಬಾಲಾಪರಾಧಿ ಎಂದು ಕ್ಲೇಮ್ ಮಾಡಿಲ್ಲ ಎಂದು ಸುಪ್ರೀಂಕೋರ್ಟ್​ಗೆ ತಿಳಿಸಲಾಯಿತು. ಆದರೆ ತರುವಾಯ, ಅರ್ಜಿದಾರರು ಅಪರಾಧ ಎಸಗಿದ ಸಮಯದಲ್ಲಿ ತಾನು ಬಾಲಾಪರಾಧಿ ಎಂದು ಮನವಿಯನ್ನು ಇಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...