ವಡೋದರಾದಲ್ಲಿ ಗುಜರಾತ್ ಕ್ವೀನ್ ರೈಲಿನ ಬೋಗಿಯೊಂದರಲ್ಲಿ 19 ವರ್ಷದ ಯುವತಿಯ ಶವವೊಂದು ನ. 4 ರಂದು ಪತ್ತೆಯಾಗಿದೆ. ಆಕೆ ಅ. 29ರಂದೇ ಮೃತಪಟ್ಟಿರುವುದು ಖಾತರಿಯಾದ ಕಾರಣ , ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಕಲೆಹಾಕಲು ಆಗಿಲ್ಲ.
ಬಳಿಕ ಮರಣೋತ್ತರ ಪರೀಕ್ಷೆಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಆಗಿರುವುದು ದೃಢಪಟ್ಟಿದೆ.
ಈ ವರದಿ ಬಂದ ಕೂಡಲೇ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದ ರೈಲ್ವೆ ಪೊಲೀಸರು ಎಸ್‌ಐಟಿ ತಂಡ ರಚಿಸಿ, ಪಶ್ಚಿಮ ರೈಲ್ವೆ ಎಸ್.ಪಿ. ಪರೀಕ್ಷಿತಾ ರಾಥೋಡ್ ನೇತೃತ್ವದಲ್ಲಿ ತನಿಖೆ ಚುರುಕುಗೊಳಿಸಿದೆ. ರೈಲ್ವೆ ನಿಲ್ದಾಣದ ಸುತ್ತಲಿನ 250 ಸಿಸಿ ಟಿವಿ ದೃಶ್ಯಾವಳಿಗಳನ್ನು ಈಗಾಗಲೇ ಶೋಧಿಸಿರುವ ಎಸ್.ಐ.ಟಿ.ಗೆ ಮಹತ್ತರ ಸುಳಿವು ಸಿಕ್ಕಿಲ್ಲ.
ವಂಚಕಿಯ ಬಂಧನಕ್ಕೆ ನೆರವಾಯ್ತು ಕೋವಿಡ್ ಲಸಿಕೆ….!
ಅದಲ್ಲದೇ, ಸಂತ್ರಸ್ತೆಯನ್ನು ರೈಲ್ವೆ ನಿಲ್ದಾಣಕ್ಕೆ ಆಟೋರಿಕ್ಷಾದಲ್ಲಿ ಕರೆತರಲಾಗಿರುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಸುಮಾರು 1000 ಆಟೋ ಚಾಲಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇಷ್ಟು ಸಾಲದೆಂದು, ವೇಶ್ಯಾವಾಟಿಕೆ ನಡೆಸುವವರು, ರೇಪ್ ಆರೋಪಿತರನ್ನು ಕೂಡ ತೀವ್ರ ವಿಚಾರಣೆಗೆ ಒಳಪಡಿಸಿ ಸಂತ್ರಸ್ತೆಯ ಹಿನ್ನೆಲೆ ಸ್ಪಷ್ಟಪಡಿಸಿಕೊಳ್ಳಲು ಯತ್ನಿಸಿದ್ದಾರೆ.
ಆದರೆ, ಬಹಳ ಮಾಹಿತಿ ಲಭ್ಯವಾಗದಿದ್ದರೂ ಎನ್.ಜಿ.ಒ.ವೊಂದರಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದಳು, ಸಾಮೂಹಿಕ ಅತ್ಯಾಚಾರದ ಬಗ್ಗೆ ಕೆಲ ದಿನಗಳು ಮೌನವಾಗಿ ವೇದನೆ ಅನುಭವಿಸಿದ್ದಳು. ನಂತರ ಸಾವಿಗೆ ಶರಣಾಗಿದ್ದಾಳೆ ಎಂದು ತನಿಖೆ ವೇಳೆ ಬಯಲಾಗಿದೆ.