alex Certify ಅಚ್ಚರಿಯಾದರೂ ಇದು ನಿಜ : 56 ವರ್ಷದ ಮಹಿಳೆ ಜೊತೆ 19 ವರ್ಷದ ಯುವಕನ ‘ಲಿವ್ ಇನ್’ ರಿಲೇಶನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಯಾದರೂ ಇದು ನಿಜ : 56 ವರ್ಷದ ಮಹಿಳೆ ಜೊತೆ 19 ವರ್ಷದ ಯುವಕನ ‘ಲಿವ್ ಇನ್’ ರಿಲೇಶನ್

ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರೆ ಇದು ಹಲವು ಸಂದರ್ಭಗಳಲ್ಲಿ ಸತ್ಯವಾಗಿದೆ ಕೂಡ ಹೌದು. ಇಂಥವುದೇ ಒಂದು ವಿಲಕ್ಷಣ ಪ್ರಕರಣದಲ್ಲಿ 56 ವರ್ಷದ ಮಹಿಳೆ ಜೊತೆ 19 ವರ್ಷದ ಯುವಕ ಪ್ರೀತಿಗೆ ಬಿದ್ದಿದ್ದಾನೆ. ಅಷ್ಟೇ ಅಲ್ಲ, ಕಳೆದ ಎರಡು ವರ್ಷಗಳಿಂದ ಅವರು ಒಟ್ಟಿಗೆ ವಾಸಿಸುತ್ತಿದ್ದಾರೆ.

ಇವರಿಬ್ಬರ ನಡುವೆ ಬರೋಬ್ಬರಿ 37 ವರ್ಷಗಳ ಅಂತರವಿದ್ದು, ಮಹಿಳೆಗೆ ಈಗಾಗಲೇ ಮದುವೆಯಾಗಿ ವಿಚ್ಛೇದನವಾಗಿದೆ. ಆಕೆಗೆ ಮೂವರು ಮಕ್ಕಳಿದ್ದು, ಅವರು 30 ವರ್ಷದ ಆಸುಪಾಸಿನಲ್ಲಿದ್ದಾರೆ. ಇಂತಹದೊಂದು ಘಟನೆ ಉತ್ತರ ಥೈಲ್ಯಾಂಡ್ ನ ಸಾಕ್ವೋನ್ ನಾಕ್ವೋನ್ ಪ್ರಾಂತ್ಯದಲ್ಲಿ ನಡೆದಿದೆ.

57 ವರ್ಷದ ಮಹಿಳೆ ಜನ್ಲಾ ಜೊತೆ ಲಿವ್ ಇನ್ ರಿಲೇಶನ್ಶಿಪ್ ನಲ್ಲಿರುವ 19 ವರ್ಷದ ವುತ್ಥಾಚಾಯ್, ಆಕೆಯ ಮನೆ ಶುಚಿಗೊಳಿಸಲು ಹೋದಾಗ ಪ್ರೇಮಾಂಕರವಾಗಿದೆ ಎನ್ನಲಾಗಿದೆ. ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ಇವರಿಬ್ಬರೂ ನೆರೆಹೊರೆಯವರು.

ಜನ್ಲಾಗೆ ವಿಚ್ಛೇದನವಾದ ಬಳಿಕ ಮಕ್ಕಳು ಪ್ರತ್ಯೇಕವಾಗಿ ವಾಸಿಸುತ್ತಿದ್ದು ಆಕೆ ಒಬ್ಬಂಟಿಯಾಗಿದ್ದಾಳೆ. ಹೀಗಾಗಿ ಯುವಕ ಆಕೆಗೆ ಮನೆ ಕೆಲಸದಲ್ಲಿ ನೆರವಾಗುತ್ತಿದ್ದ. ಪರಸ್ಪರ ಮಾತನಾಡುತ್ತಾ ಒಬ್ಬರಿಗೊಬ್ಬರು ಆಕರ್ಷಿತರಾಗಿದ್ದು, ಎರಡು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ.

ತಮ್ಮ ಈ ಸಂಬಂಧದ ಕುರಿತು ಸಾರ್ವಜನಿಕರು ಏನು ಮಾತನಾಡುತ್ತಾರೆ ಎಂಬುದರ ಕುರಿತು ಇವರುಗಳು ಕ್ಯಾರೆ ಅನ್ನುತ್ತಿಲ್ಲ. ಎಲ್ಲಿಗೆ ಹೋದರೂ ಕೈ ಹಿಡಿದುಕೊಂಡು ಒಟ್ಟಿಗೆ ತೆರಳುತ್ತಾರೆ. ಮಾಧ್ಯಮಗಳಿಗೆ ಸಂದರ್ಶನ ನೀಡುವಾಗಲು ಪರಸ್ಪರ ಬಿಟ್ಟು ಕೊಡುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...