
ಇವರಿಬ್ಬರ ನಡುವೆ ಬರೋಬ್ಬರಿ 37 ವರ್ಷಗಳ ಅಂತರವಿದ್ದು, ಮಹಿಳೆಗೆ ಈಗಾಗಲೇ ಮದುವೆಯಾಗಿ ವಿಚ್ಛೇದನವಾಗಿದೆ. ಆಕೆಗೆ ಮೂವರು ಮಕ್ಕಳಿದ್ದು, ಅವರು 30 ವರ್ಷದ ಆಸುಪಾಸಿನಲ್ಲಿದ್ದಾರೆ. ಇಂತಹದೊಂದು ಘಟನೆ ಉತ್ತರ ಥೈಲ್ಯಾಂಡ್ ನ ಸಾಕ್ವೋನ್ ನಾಕ್ವೋನ್ ಪ್ರಾಂತ್ಯದಲ್ಲಿ ನಡೆದಿದೆ.
57 ವರ್ಷದ ಮಹಿಳೆ ಜನ್ಲಾ ಜೊತೆ ಲಿವ್ ಇನ್ ರಿಲೇಶನ್ಶಿಪ್ ನಲ್ಲಿರುವ 19 ವರ್ಷದ ವುತ್ಥಾಚಾಯ್, ಆಕೆಯ ಮನೆ ಶುಚಿಗೊಳಿಸಲು ಹೋದಾಗ ಪ್ರೇಮಾಂಕರವಾಗಿದೆ ಎನ್ನಲಾಗಿದೆ. ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ಇವರಿಬ್ಬರೂ ನೆರೆಹೊರೆಯವರು.
ಜನ್ಲಾಗೆ ವಿಚ್ಛೇದನವಾದ ಬಳಿಕ ಮಕ್ಕಳು ಪ್ರತ್ಯೇಕವಾಗಿ ವಾಸಿಸುತ್ತಿದ್ದು ಆಕೆ ಒಬ್ಬಂಟಿಯಾಗಿದ್ದಾಳೆ. ಹೀಗಾಗಿ ಯುವಕ ಆಕೆಗೆ ಮನೆ ಕೆಲಸದಲ್ಲಿ ನೆರವಾಗುತ್ತಿದ್ದ. ಪರಸ್ಪರ ಮಾತನಾಡುತ್ತಾ ಒಬ್ಬರಿಗೊಬ್ಬರು ಆಕರ್ಷಿತರಾಗಿದ್ದು, ಎರಡು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ.
ತಮ್ಮ ಈ ಸಂಬಂಧದ ಕುರಿತು ಸಾರ್ವಜನಿಕರು ಏನು ಮಾತನಾಡುತ್ತಾರೆ ಎಂಬುದರ ಕುರಿತು ಇವರುಗಳು ಕ್ಯಾರೆ ಅನ್ನುತ್ತಿಲ್ಲ. ಎಲ್ಲಿಗೆ ಹೋದರೂ ಕೈ ಹಿಡಿದುಕೊಂಡು ಒಟ್ಟಿಗೆ ತೆರಳುತ್ತಾರೆ. ಮಾಧ್ಯಮಗಳಿಗೆ ಸಂದರ್ಶನ ನೀಡುವಾಗಲು ಪರಸ್ಪರ ಬಿಟ್ಟು ಕೊಡುವುದಿಲ್ಲ.
